ADVERTISEMENT

ಚಿತ್ರಲಿಂಗೇಶ್ವರ ಜಾತ್ರಾ ಮಹೋತ್ಸವ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 5:19 IST
Last Updated 20 ಫೆಬ್ರುವರಿ 2021, 5:19 IST

ಅರಸೀಕೆರೆ: ತಾಲ್ಲೂಕಿನ ಚಲ್ಲಾಪುರ ಗ್ರಾಮದ ಚಿತ್ರಲಿಂಗೇಶ್ವರ ಸ್ವಾಮಿ ನೂತನ ದೇವಾಲಯದ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವವು ಫೆ.21 ರಿಂದ 23 ರವರೆಗೆ ನಡೆಯಲಿದೆ.

ಫೆ.21 ರಂದು ಬೆಳಿಗ್ಗೆ 5 ಗಂಟೆಗೆ ಧ್ವಜಾರೋಹಣ ಮತ್ತು ಗಂಗಾಪೂಜೆ, ಗೋಪೂಜೆ, ಪುರಪ್ರವೇಶ. ಬಳಿಕ ಗಣಪತಿ ಪೂಜೆ, ಪಂಚ ಕಳಸ ಸ್ಥಾಪನೆ, ನವಗ್ರಹ ಪೂಜೆ, ಮೃತ್ಯುಂಜಯ ಹೋಮ ನಡೆಯಲಿದೆ.

ಫೆ.22 ರಂದು ಬೆಳಿಗ್ಗೆ ಹಾರನಹಳ್ಳಿ ಓಬಳೇಶ್ವರ ಸ್ವಾಮಿ ಹಾಗೂ ಚಲ್ಲಾಪುರದ ದೂತರಾಯಸ್ವಾಮಿ ನೇತೃತ್ವದಲ್ಲಿ ನೂತನ ದೇವಾಲಯದ ಕಳಸಾರೋಹಣ. ಬಳಿಕ ಚಿತ್ರಲಿಂಗೇಶ್ವರ ಸ್ವಾಮಿ ದೇವರಿಗೆ ಮಹಾಮಂಗಳಾರತಿ.

ADVERTISEMENT

ಬೆಳಿಗ್ಗೆ 11ಕ್ಕೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 8ಕ್ಕೆ ಚಿತ್ರಲಿಂಗೇಶ್ವರ ಸ್ವಾಮಿಯ ‘ನಡೆಮುಡಿ’ ಮಹೋತ್ಸವ, ರಾತ್ರಿ 9.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಫೆ.23 ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಸ್ವಾಮಿಯವರ ‘ಕೆಂಡ ಸೇವೆ’ ಬಳಿಕ ದೂತರಾಯಸ್ವಾಮಿ ಹಾಗೂ ಕರಿಯಮ್ಮ ದೇವಿಯವರ ಮಣೇವು ಕಾರ್ಯಕ್ರಮ. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ಚಲ್ಲಾಪುರದ ಚಿತ್ರಲಿಂಗೇಶ್ವರ ಸ್ವಾಮಿ ಯುವಕ ಸಂಘ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.