
ಶ್ರವಣಬೆಳಗೊಳ: ಭಾರತ ದೇಶ ಆಂತರಿಕವಾಗಿ ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಹ ಆರ್ಥಿಕ ನಿರ್ವಹಣೆಯ ನಿರ್ಧಾರಗಳಲ್ಲಿ ಬಲಿಷ್ಠ ರಾಷ್ಟ್ರಗಳನ್ನು ಹಿಂದಿಕ್ಕಿ ಮುನ್ನುಗ್ಗುವ ಸ್ಥಿತಿಯನ್ನು ಪ್ರಧಾನ ಮತ್ರಿ ನರೇಂದ್ರ ಮೋದಿಯವರ ನೃತೃತ್ವ ಸರ್ಕಾರ ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ೆಂದು ತಾಲ್ಲೂಕು ಬಿಜೆಪಿ ಮುಖಂಡ ಸಿ. ಆರ್. ಚಿದಾನಂದ್ ಭಾನುವಾರ ಹೇಳಿದರು.
ಹೋಬಳಿಯ ಕಾಂತರಾಜ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲು ಮತಿಘಟ್ಟ ಗ್ರಾಮದ ಅಕ್ಕಿ ರಾಶಮ್ಮ ದೇವಾಲಯದ ಬಳಿ ಏರ್ಪಡಿಸಿದ್ದ ಕಾಂಗ್ರೆಸ್ ಜೆಡಿಎಸ್ ಪಕ್ಷ ತೊರೆದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಸ್ವಾಗತಿ ಅವರು ಮಾತನಾಡಿದರು. ರಾಜ್ಯ ನಾಯಕರುಗಳ ನಿರ್ದೇಶನದಂತೆ ಪ್ರತಿ ಗ್ರಾಮಕ್ಕೂ ಖುದ್ದು ಭೇಟಿ ನೀಡಿ ಕಾರ್ಯಕರ್ತರುಗಳನ್ನು ಸಂಘಟಿಸಿ ಅಧಿಕಾರ ಪಡೆದ ನಂತರ ಹೇಗೆ ಕಾರ್ಯೋನ್ಮುಖವಾಗಿ ಇಒತರೆ ಪಕ್ಷಗಳಿಗೆ ಭಿನ್ನವಾಗಿ ಸಮಸ್ಯೆಗಳನ್ನು ಬಗೆಹರಿಸುವತ್ತ ಹೆಚ್ಚಿನ ಮುತುವರ್ಜಿ ವಹಿಸುತ್ತದೆ ಎಂದರು.
ಕಾಂಗ್ರೆಸ್ ಜೆಡಿಎಸ್ ಮುಖಂಡರುಗಳು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದ ಸಂದರ್ಭದಲ್ಲಿ ಪಕ್ಷದ ಚಿಹ್ನೆಯ ಧ್ವಜಗಳನ್ನು ನೀಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ತಂಡದವರನ್ನು ಗ್ರಾಮಸ್ಥರು ಮಾಲಾರ್ಪಣೆ ಮಾಡಿ ಶಾಲು ಹೊದಿಸಿ ಗೌರವಿಸಿ ಸಂಭ್ರಮಪಟ್ಟರು.
ಬಿಜೆಪಿ ಹೋಬಳಿಯ ಮುಖಂಡ ಗುರಿಗಾರನಹಳ್ಳಿ ಮಂಜೇಗೌಡ ಹಾಲು ಮತಿಘಟ್ಟದ ನಟೇಶ್, ಪ್ರಫುಲ್ ಉಮೇಶ್, ಚಂದ್ರಶೇಖರ್, ಕಾರ್ತಿಕ್, ಗಿರೀಶ್, ರಮೇಶ್, ರಾಖೇಶ್, ಉದಯ್, ಮಂಜು, ಮಧು, ರವಿ, ಆದರ್ಶ, ದೊಡ್ಡಟೇಗೌಡ, ನಾಗೇಶ್, ಮಂಜೇಗೌಡ, ವಿನು, ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.