ADVERTISEMENT

ಧರ್ಮದ ಹಾದಿಯಲ್ಲಿ ಸಾಗಬೇಕು

ಶ್ರೀರಾಮೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:55 IST
Last Updated 13 ಜೂನ್ 2019, 19:55 IST
ಹಾಸನ ತಾಲ್ಲೂಕಿನ ಕಟ್ಟಾಯ ಗ್ರಾಮದ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟಿ ನೀಡಿದರು.
ಹಾಸನ ತಾಲ್ಲೂಕಿನ ಕಟ್ಟಾಯ ಗ್ರಾಮದ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟಿ ನೀಡಿದರು.   

ಹಾಸನ: ಸನಾತನ ಧರ್ಮ ಧಾರ್ಮಿಕ ನಂಬಿಕೆಯ ಮೇಲೆ ನಿಂತಿದೆ. ಮೋಸ, ವಂಚನೆಗೆ ಒಳಗಾಗದೆ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದ ಧಾರ್ಮಿಕ ದತ್ತಿ ನಿಧಿಯಿಂದ ಜಿರ್ಣೋದ್ಧಾರ ಮಾಡಿರುವ ತಾಲ್ಲೂಕಿನ ಕಟ್ಟಾಯ ಗ್ರಾಮದ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದರು.

ದೇವರ ಮೇಲೆ ಜನರಿಗೆ ಅಪಾರವಾದ ಭಕ್ತಿ, ನಂಬಿಕೆ ಇದೆ. ಕಷ್ಟ, ದುಃಖದಲ್ಲಿ ದೇವರ ಮೊರೆ ಹೋಗುತ್ತಾರೆ. ದೈವ ಶಕ್ತಿ ಇದೆ ಎಂದು ನಂಬಿ ನಡೆಯುತ್ತಿದ್ದೇವೆ. ಸಮಾಜಕ್ಕೆ ತಮ್ಮ ಕೈಲಾದಷ್ಟು ಒಳ್ಳೆಯ ಕೆಲಸ ಮಾಡಬೇಕು. ಧರ್ಮಸ್ಥಳ ಪ್ರತಿಷ್ಠಾನದ ವತಿಯಿಂದ ಅನೇಕ ಹಳೆಯ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ರಾಜ್ಯದಲ್ಲಿ ಮಳೆ, ಬೆಳೆಯಾಗಿ ರೈತರು ಸುಖ,ಶಾಂತಿಯಿಂದ ಇರಲಿ ಎಂದು ಹಾರೈಸಿದರು.

ADVERTISEMENT

ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಪ್ರಸನ್ನರಾವ್, ಧರ್ಮಸ್ಥಳದ ಹರಿರಾಮ್ ಶೆಟ್ಟಿ, ಎ. ವಿ. ಶೆಟ್ಟಿ, ಗ್ರಾಮದ ಮುಖಂಡರಾದ ಕಟ್ಟಾಯ ಶಿವಕುಮಾರ್, ಪ್ರಕಾಶ್, ಕೆ. ಎಸ್. ಜಗದೀಶ್, ಕೆ. ಚಂದ್ರ ಶೇಖರ್, ಜಿ. ಕೆ. ಕುಮಾರಸ್ವಾಮಿ, ರಂಗಸ್ವಾಮಿ, ಡಿ.ಮಲ್ಲೇಶ್, ಎಸ್‌ಡಿಎಂ ಕಾಲೇಜಿನ ಅಧೀಕ್ಷಕ ಮಲ್ಲಿಕಾರ್ಜನ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.