ADVERTISEMENT

ಬೇಲೂರು | ಪಡಿತರ ವಿತರಣೆ: ಸರ್ವರ್ ಸಮಸ್ಯೆ ಪರಿಹರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 13:43 IST
Last Updated 28 ನವೆಂಬರ್ 2024, 13:43 IST
ಬೇಲೂರಿನಲ್ಲಿ ಪಡಿತರ ವಿತರಿಸಲು ಉಂಟಾಗುತ್ತಿರುವ ಸಾರ್ವರ್ ಸಮಸ್ಯೆಯನ್ನು ಸರಿಪಪಡಿಸಬೇಕೆಂದು ಒತ್ತಾಯಿಸಿ ಪಡಿತರ ವಿತರಕರ ‌ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗಂಗೂರು ರಂಗೇಗೌಡ ನೇತೃತ್ವದಲ್ಲಿ ತಹಶೀಲ್ದಾರ್ ಎಂ.ಮಮತಾ ಅವರಿಗೆ ಮನವಿ ಸಲ್ಲಿಸಲಾಯಿತು.
ಬೇಲೂರಿನಲ್ಲಿ ಪಡಿತರ ವಿತರಿಸಲು ಉಂಟಾಗುತ್ತಿರುವ ಸಾರ್ವರ್ ಸಮಸ್ಯೆಯನ್ನು ಸರಿಪಪಡಿಸಬೇಕೆಂದು ಒತ್ತಾಯಿಸಿ ಪಡಿತರ ವಿತರಕರ ‌ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗಂಗೂರು ರಂಗೇಗೌಡ ನೇತೃತ್ವದಲ್ಲಿ ತಹಶೀಲ್ದಾರ್ ಎಂ.ಮಮತಾ ಅವರಿಗೆ ಮನವಿ ಸಲ್ಲಿಸಲಾಯಿತು.   

ಬೇಲೂರು: ತಾಲ್ಲೂಕಿನ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸಲು ಸರ್ವರ್ ಸಮಸ್ಯೆ ಉಂಟಾಗಿದ್ದು, ಕೂಡಲೆ ಇದನ್ನು ಸರಿಪಡಿಸಬೇಕೆಂದು ಪಡಿತರ ವಿತರಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗಂಗೂರು ರಂಗೇಗೌಡ ತಹಶೀಲ್ದಾರ್ ಎಂ.ಮಮತಾ ಅವರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಮೂರು ತಿಂಗಳಿಂದ ತಾಲ್ಲೂಕಿನಾದ್ಯಂತ ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಗ್ರಾಹಕರು ಮತ್ತು ಮಾಲೀಕರ ನಡುವೆ ವಾಗ್ದಾದ ನಡೆಯುತ್ತಿದ್ದು, ಕೂಡಲೆ ಸರ್ವರ್ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದರು.

ತಾಲ್ಲೂಕಿನ ಮಲೆನಾಡು ಭಾಗಗಳಲ್ಲಿ ಕೂಲಿ ಕಾರ್ಮಿಕರು, ಬಡವರೇ ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಗ್ರಾಹಕರು ದಿನ ನಿತ್ಯ ನ್ಯಾಯ ಬೆಲೆ ಅಂಗಡಿಗಳಿಗೆ ಅಲೆಯುತ್ತಿದ್ದಾರೆ. ಈ ಭಾಗದ ಕೆಲವು ಕಡೆಗಳಲ್ಲಿ ಕಾಡಾನೆ ಸಮಸ್ಯೆ ಇದ್ದು, ಅನಾಹುತವಾಗುವ ಮುನ್ನಾ ಸುಗಮವಾಗಿ ಪಡಿತರ ಪಡೆಯಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

ವೃದ್ಧರು ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರ ಹಿತ ದೃಷ್ಟಿಯಿಂದ ಈ ಹಿಂದಿನಂತೆಯೇ ಒಟಿಪಿ ಮೂಲಕ ಪಡಿತರ ಪಡೆಯಲು ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಂಡರು. ತಾಲ್ಲೂಕು ಸರ್ಕಾರಿ ಪಡಿತರ ವಿತರಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಅನಂತು, ಉಪಾದ್ಯಕ್ಷ ಮಹೇಶ್, ಖಜಾಂಚಿ ಮೋಹನ್, ನಿರ್ದೇಶಕ ನಂಜುಂಡಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.