ADVERTISEMENT

ಶಿಕ್ಷಣದಿಂದ ಸದೃಢ ಬದುಕು ಸಾಧ್ಯ: ಕುಸುಮ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:31 IST
Last Updated 24 ಫೆಬ್ರುವರಿ 2026, 7:31 IST
ನುಗ್ಗೇಹಳ್ಳಿ ಹೋಬಳಿಯ ಗೋಕುಲ ವಿಜಾಸಮತೆ ವತಿಯಿಂದ ಗೋಧೂಳಿ ಸಂಭ್ರಮ, ಶಾಲಾ ವಾರ್ಷಿಕೋತ್ಸವವನ್ನು ಜಿ.ಪಂ. ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಉದ್ಘಾಟಿಸಿದರು 
ನುಗ್ಗೇಹಳ್ಳಿ ಹೋಬಳಿಯ ಗೋಕುಲ ವಿಜಾಸಮತೆ ವತಿಯಿಂದ ಗೋಧೂಳಿ ಸಂಭ್ರಮ, ಶಾಲಾ ವಾರ್ಷಿಕೋತ್ಸವವನ್ನು ಜಿ.ಪಂ. ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಉದ್ಘಾಟಿಸಿದರು    

ನುಗ್ಗೇಹಳ್ಳಿ: ‘ಹಲವು ಕಾರಣಗಳಿಂದಾಗಿ ಇನ್ನೂ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಮಾತ್ರ ಅವರು ಬದುಕು ಕಟ್ಟಿಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಹೇಳಿದರು.

ಹೋಬಳಿಯ ಗೋಕುಲ ವಿದ್ಯಾ ಸಂಸ್ಥೆ ಹಾಗೂ ಗೋಕುಲ ಅಕಾಡೆಮಿ ವತಿಯಿಂದ ಶಾಲಾ ವಾರ್ಷಿಕೋತ್ಸವ ಗೋಧೂಳಿ ಪ್ರತಿಭಾ ಪಯಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸಹಕಾರ ಸಂಘಗಳ ಸಹಾಯಕ ನಿವೃತ್ತ ನಿಬಂಧಕ ರಾದ ನರಸಿಂಹಮೂರ್ತಿ,ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನಾರಾಯಣ್ ಮಾತನಾಡಿದರು. 

ADVERTISEMENT

ಶಾಲಾ ವಾರ್ಷಿಕೋತ್ಸವ ಅಂಗವಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತಗೊಂಡವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಉತ್ತಮ ವಿದ್ಯಾರ್ಥಿಗೆ ನೀಡುವ ಪ್ರಶಸ್ತಿಯನ್ನು ನೀಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಗೋಕುಲ ವಿದ್ಯಾ ಸಂಸ್ಥೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ದೇವರಾಜ್, ಜೆ.ಎಲ್.ರವಿ, ಶಿಕ್ಷಕಿಯಾದ ಎನ್‌.ಬಿ. ಲಕ್ಷ್ಮೀದೇವಿ ಅವರನ್ನು ಶಾಲಾ ಆಡಳಿತ ವತಿಯಿಂದ ಸನ್ಮಾನಿಸಲಾಯಿತು.

ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಟೇಲ್ ಕುಮಾರ್, ನಿರ್ದೇಶಕ ಹುಲಿಕೆರೆ ಸಂಪತ್ ಕುಮಾರ್, ತಾ.ಪಂ. ಮಾಜಿ ಸದಸ್ಯ ಬೆಳಗಿಹಳ್ಳಿ ಪುಟ್ಟಸ್ವಾಮಿ, ಹೋಬಳಿ ಶಿಕ್ಷಣ ಸಂಯೋಜಕ ಕರಿಯಪ್ಪ ಗೌಡ, ಸಿಆರ್‌ಪಿಗಳಾದ ಮಂಜೇಗೌಡ, ಅಶೋಕ್ ಸುಂದರನ್, ಶ್ರೀಕಾಂತ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕುಳ್ಳೇಗೌಡ, ನಟರಾಜ್ ಯಾದವ್, ಹೊನ್ನೇಗೌಡ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್‌ಬಿ ಉಮೇಶ್, ಗೌರವಾಧ್ಯಕ್ಷ ಎಚ್.ಎಂ. ಗೋಪಾಲ್, ನಿರ್ದೇಶಕ ಪೃಥ್ವಿ ಯಾದವ್, ಮುಖ್ಯ ಶಿಕ್ಷಕಿ ಭುವನೇಶ್ವರಿ, ಪ್ರಮುಖರಾದ ಶಿವಮ್ಮ ನಾರಾಯಣ, ಸಾವಿತ್ರಮ್ಮ ಗೋಪಾಲ್, ಮನೋಜ್ ಯಾದವ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.