ADVERTISEMENT

ಕಾಡಾನೆ ದಾಳಿ: ಕ್ಯಾತನಹಳ್ಳಿ ರೈತ ಬಲಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 3:33 IST
Last Updated 20 ಡಿಸೆಂಬರ್ 2020, 3:33 IST
ಪ್ರಧಾನ್
ಪ್ರಧಾನ್   

‍ಆಲೂರು: ತಾಲ್ಲೂಕಿನ ಕಾಡುಭಕ್ತರವಳ್ಳಿ (ಕ್ಯಾತನಹಳ್ಳಿ) ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಕಾಡಾನೆ ದಾಳಿಗೆ ಸಿಲುಕಿ ರೈತಪ್ರಧಾನ್(36) ಎಂಬುವವರು ಮೃತಪಟ್ಟಿದ್ದಾರೆ.

ಮನೆ ಬಳಿಯ ಕಾಫಿ ತೋಟದಲ್ಲಿ ನೀರು ಹಾಯಿಸಲು ಪೈಪ್‌ ಅಳವಡಿ ಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಸೊಂಡಿಲಿನಿಂದ ಎಳೆದುಕೊಂಡು ಹೋಗಿ ನೆಲಕ್ಕೆ ಅಪ್ಪಳಿಸಿದೆ.

ಪ್ರಧಾನ್ ಅವರಿಗೆ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.

ADVERTISEMENT

ಗ್ರಾಮಸ್ಥರ ಆಕ್ರೋಶ: ಶಾಸಕರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತದೇಹ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎಚ್.ಕೆ.ಕುಮಾರಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಹರೀಶ್, ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಶಿರೀನ್‍ತಾಜ್, ವಲಯ ಅರಣ್ಯಾಧಿಕಾರಿ ವಿನಯಚಂದ್ರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ‘ಕಾಡಾನೆ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದೊಂದಿಗೆ ಹಲವು ಬಾರಿ ಚರ್ಚೆ ಮಾಡಲಾಗಿದೆ. ಚುನಾವಣೆ ನಂತರ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಮಾತನಾಡಿ ಶಾಶ್ವತ ಪರಿಹಾರಕ್ಕೆ ಶ್ರಮಿಸುತ್ತೇನೆ’ ಎಂದು ಹೇಳಿದರು.

‘ಕಾಡಾನೆ ಹಾವಳಿ ತಡೆಗೆ ಯೋಜನೆ ರೂಪಿಸದಿದ್ದರೆ ಪಾದಯಾತ್ರೆ ಕೈಗೊಂಡು ಜಿಲ್ಲಾ ಕೇಂದ್ರ ಅಥವಾ ಬೆಂಗಳೂರಿನಲ್ಲಿ ರೈತರೊಂದಿಗೆ ಪ್ರತಿಭಟನೆ ನಡೆಸಲಾ ಗುವುದು’ ಎಂದು ತಿಳಿಸಿದರು.

‘ಕಾಡಾನೆ ದಾಳಿಗೆ ಸಿಲುಕಿ ನಷ್ಟಕ್ಕೊಳಗಾದ ರೈತರಿಗೆ ವಿತರಿಸುವ ₹1.2 ಕೋಟಿ ಪರಿಹಾರ ಕೂಡಲೇ ನೀಡಬೇಕು. ಮೃತ ಪ್ರಧಾನ್‌ಗೆ ₹2 ಲಕ್ಷ ಪರಿಹಾರ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.