ADVERTISEMENT

ಆನೆಗುಂಡಿ ಪ್ರದೇಶದಲ್ಲಿ ಹೆಣ್ಣಾನೆ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 14:17 IST
Last Updated 2 ಜನವರಿ 2021, 14:17 IST
ಆನೆಗುಂಡಿ ಪ್ರದೇಶದಲ್ಲಿ ಹೆಣ್ಣಾನೆ ಶವ ಪತ್ತೆಯಾಗಿದೆ.
ಆನೆಗುಂಡಿ ಪ್ರದೇಶದಲ್ಲಿ ಹೆಣ್ಣಾನೆ ಶವ ಪತ್ತೆಯಾಗಿದೆ.   

ಹೆತ್ತೂರು: ಹೋಬಳಿಯ ಅರಣಿ ಗ್ರಾಮ ಸಮೀಪದ ಆನೆಗುಂಡಿ ಪ್ರದೇಶದಲ್ಲಿ ಶನಿವಾರ 24 ವರ್ಷದಹೆಣ್ಣಾನೆಶವ ಪತ್ತೆಯಾಗಿದೆ.

ಕಾಲಿಗೆ ಆಗಿದ್ದ ಗಾಯದಿಂದ ಯಸಳೂರು ವಲಯದ ಹೊಂಡದಲ್ಲಿ ಎರಡು ದಿನಗಳಿಂದ ಬಿದ್ದು ನರಳುತ್ತಿತ್ತು. ಅತಿಯಾದ ನೋವಿನಿಂದ ಮೃತಪಟ್ಟಿರಬಹುದು ಎನ್ನಲಾಗಿದೆ. ಸ್ಥಳೀಯರು ಶವ ನೋಡಿ ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ವಲಯ ಅರಣ್ಯಾಧಿಕಾರಿ ಮೋಹನ್ ಭೇಟಿ ನೀಡಿ ಪರಿಶೀಲಿಸಿದರು.

ವೈದ್ಯ ಮುರಳಿಧರ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಸಂಸ್ಕಾರ ಮಾಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.