ADVERTISEMENT

ಬೇಲೂರು: ಚೀಕನಹಳ್ಳಿ ಬಳಿ ಕಾಡಾನೆಗಳು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:50 IST
Last Updated 28 ಜುಲೈ 2025, 5:50 IST
ಬೇಲೂರಿನ ಚೀಕನಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಕಾಡಾನೆಗಳು
ಬೇಲೂರಿನ ಚೀಕನಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಕಾಡಾನೆಗಳು   

ಬೇಲೂರು: ತಾಲ್ಲೂಕಿನ ಚೀಕನಹಳ್ಳಿಯ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂದಾಜು 25 ಕಾಡಾನೆಗಳು ಭಾನುವಾರ ರಸ್ತೆ ದಾಟಿದ್ದು, ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿ‌ದಾಡಿದೆ.

ಬೇಲೂರು- ಮೂಡಿಗೆರೆ ರಸ್ತೆಯ ಚೀಕನಹಳ್ಳಿ ಬಳಿ ಕಾಡಾನೆಗಳು ಒಂದರ ಹಿಂದೆ ಒಂದು ರಸ್ತೆ ದಾಟಿದ್ದು, ಆನೆಗಳನ್ನು ಕಂಡ ವಾಹನ ಸವಾರರು ಭಯಭೀತರಾಗಿ ವಾಹನಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಆನೆಗಳು ದಾಟುತ್ತಿದ್ದುದನ್ನು ಸ್ಥಳೀಯರು ವಿಡಿಯೊ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT