ಹಾಸನ :ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಸಮೀಕ್ಷೆಯ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ಹಾಗೂ ಉಪಜಾತಿ ಕಾಲಂನಲ್ಲಿ ಅವರವರ ಉಪ ಪಂಗಡಗಳನ್ನು ದಾಖಲಿಸುವಂತೆ ವೀರಶೈವ ಲಿಂಗಾಯತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಐಸಾಮಿಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ಸೆ.19ರಂದು ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಸಮಾಜದ ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಮಾಜಿ ಶಾಸಕರು ಮತ್ತು ಸಮಾಜದ ಗಣ್ಯರ ತೀರ್ಮಾನ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರೆಯ ಮೇರೆಗೆ ಗಣತಿ ವೇಳೆ ಕಾಲಂ ನಂಬರ್ 8ರಲ್ಲಿ ಹಿಂದೂ ಧರ್ಮ ಎಂದೂ, ಕಾಲಂ 9ರಲ್ಲಿ ವೀರಶೈವ ಲಿಂಗಾಯತ ಜಾತಿ ಹಾಗೂ ಕಾಲಂ 10ರಲ್ಲಿ ಅವರವರ ಉಪ ಪಂಗಡಗಳ ಉಪಜಾತಿಗಳ ಹೆಸರು ದಾಖಲಿಸುವಂತೆ ಮನವಿ ಮಾಡಿದರು.
ಸರ್ಕಾರದಿಂದ ಸಮೀಕ್ಷೆ ಮಾಡುವ ಅವಧಿ ಕಡಿಮೆ ಇರುವುದರಿಂದ ಸಮಾಜದ ಮತ್ತು ತಾಲ್ಲೂಕಿನ ಸಂಘ– ಸಂಸ್ಥೆಗಳು ಈ ಕುರಿತು ಸಮುದಾಯದವರಿಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಕೋರಿದರು.
ರುದ್ರಕುಮಾರ್, ಕಿರಣ್ ಕುಮಾರ್, ಮಲ್ಲಿಕಾರ್ಜುನ್, ನಟೇಶ್, ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.