ಬಾನು ಮುಷ್ತಾಕ್
ಹಾಸನ: ‘ನೀವು ಚಾಮುಂಡೇಶ್ವರಿ ತಾಯಿ ಎನ್ನುತ್ತೀರಿ. ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ದಸರಾ ಉತ್ಸವವನ್ನು ನಾಡಹಬ್ಬ ಎನ್ನುತ್ತಾರೆ, ಅದನ್ನೂ ಗೌರವಿಸುತ್ತೇನೆ’ ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು
ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಪ್ರಯುಕ್ತ ಬೆಂಗಳೂರಿನ ‘ಅಮ್ಮನ ಮಡಿಲು’ ಸಂಸ್ಥೆ ಸಂಸ್ಥಾಪಕಿ, ಕಲಾವಿದೆ ಶಶಿಕಲಾ ಅವರಿಂದ ಬಾಗಿನ ಸ್ವೀಕರಿಸಿ ಅವರು ಮಾತನಾಡಿದರು.
‘ನಾಡ ಹಬ್ಬ, ಚಾಮುಂಡೇಶ್ವರಿ ತಾಯಿ ಎಂದು ಪ್ರೀತಿ, ಅಭಿಮಾನದಿಂದ ಕರೆಯುವುದೂ ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ಹಾಗಾಗಿ ಇದು ನನಗೂ ಪ್ರಿಯವಾಗಿದೆ’ ಎಂದು ಹೇಳಿದರು.
‘ದಸರಾ ನಾನು ಪ್ರೀತಿಯಿಂದ ಭಾಗಿಯಾಗುವ ಹಬ್ಬ. ತಂದೆ-ತಾಯಿ ಜೊತೆ ಹಲವು ಬಾರಿ ಜಂಬೂಸವಾರಿ ನೋಡಲು ಹೋಗಿದ್ದೆ. ಈಗ ನನಗೇ ಉದ್ಘಾಟನೆಗೆ ಆಹ್ವಾನ ಬಂದಿರುವುದು ಸಂತೋಷವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.