ADVERTISEMENT

ಸಾಲು ಮರದ ತಿಮ್ಮಕ್ಕನ ದತ್ತುಪುತ್ರ ನೆಟ್ಟ ಗಿಡಗಳಿಗೆ ಬೆಂಕಿ ಹಚ್ಚಿದ ದುರುಳರು

ಯಗಚಿ ಜಲಾಶಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 7:07 IST
Last Updated 21 ಮಾರ್ಚ್ 2022, 7:07 IST
ಬೇಲೂರು ತಾಲ್ಲೂಕಿನ ಯಗಚಿ ಜಲಾಶಯದ ಸಮೀಪ ಬೆಂಕಿ ನಂದಿಸಲು ಬಳ್ಳೂರು ಉಮೇಶ್ ಪ್ರಯತ್ನಿಸಿದರು (ಎಡಚಿತ್ರ). ಅರಕಲಗೂಡು ತಾಲ್ಲೂಕಿನ ದಡದಹಳ್ಳಿ ಬಳಿ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು
ಬೇಲೂರು ತಾಲ್ಲೂಕಿನ ಯಗಚಿ ಜಲಾಶಯದ ಸಮೀಪ ಬೆಂಕಿ ನಂದಿಸಲು ಬಳ್ಳೂರು ಉಮೇಶ್ ಪ್ರಯತ್ನಿಸಿದರು (ಎಡಚಿತ್ರ). ಅರಕಲಗೂಡು ತಾಲ್ಲೂಕಿನ ದಡದಹಳ್ಳಿ ಬಳಿ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು   

ಬೇಲೂರು: ಇಲ್ಲಿನ ಯಗಚಿ ಜಲಾಶಯದ ಸಮೀಪ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ಸಾವಿರಾರು ಗಿಡಗಳು ಸುಟ್ಟು ಹೋಗಿವೆ.

ಸಾಲುಮರದ ತಿಮ್ಮಕ್ಕ ಅವರ ದತ್ತು ಪುತ್ರ ಬಳ್ಳೂರು ಉಮೇಶ್ ಅವರು ನೂರಾರು ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಶನಿವಾರ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ನೂರಾರು ಎಕರೆ ಪ್ರದೇಶ ಸುಟ್ಟು ಹೋಗಿದೆ.

ಸ್ಥಳಕ್ಕೆ ಬಂದ ಉಮೇಶ್ ಹಾಗೂ ಸ್ನೇಹಿತರಾದ ನಂಜುಂಡಿ, ಶರತ್ ಬೆಂಕಿ ನಂದಿಸಲು ಹರಸಾಹಸಪಟ್ಟರು. ನಂತರ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಬೆಂಕಿ ನಂದಿಸಲಾಯಿತು.

ADVERTISEMENT

‘ಯಗಚಿ ಜಲಾಶಯ ಯೋಜನೆಗೆ ಸೇರಿದ ಅಣೆಕಟ್ಟೆಯ ಮುಂಭಾಗ ಮತ್ತು ಅಕ್ಕಪಕ್ಕದ ನೂರಾರು ಎಕರೆ ಜಾಗದಲ್ಲಿ 2013ರಿಂದ ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ನೆಟ್ಟು, ಪೋಷಿಸುತ್ತಿದ್ದೆ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಇಟ್ಟಿದ್ದಾರೆ. ಗಿಡಗಳು ಬೆಂಕಿಗೆ ಅಹುತಿಯಾಗಿವೆ’ ಎಂದು ನೋವಿನಿಂದ ನುಡಿದರು.

‘ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.