ADVERTISEMENT

ಅರಕಲಗೂಡು: ಕೆರೆಯಲ್ಲಿ ನೀರಿಲ್ಲದೆ ಸಾವಿರಾರು ಮೀನುಗಳ ಸಾವು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 14:58 IST
Last Updated 8 ಮಾರ್ಚ್ 2024, 14:58 IST
ಅರಕಲಗೂಡು ತಾಲ್ಲೂಕಿನ ದುಮ್ಮಿ ಗ್ರಾಮದ ದೇವಿಗೆರೆಯಲ್ಲಿ ಸತ್ತು ತೇಲುತ್ತಿರುವ ಮೀನುಗಳು
ಅರಕಲಗೂಡು ತಾಲ್ಲೂಕಿನ ದುಮ್ಮಿ ಗ್ರಾಮದ ದೇವಿಗೆರೆಯಲ್ಲಿ ಸತ್ತು ತೇಲುತ್ತಿರುವ ಮೀನುಗಳು   

ಅರಕಲಗೂಡು: ತಾಲ್ಲೂಕಿನ ದುಮ್ಮಿ ಗ್ರಾಮದ ದೇವಿಗೆರೆಯಲ್ಲಿ ನೀರಿನ ಮಟ್ಟ ಕ್ಷೀಣಿಸಿದ್ದು, ಬಿಸಿಲ ಬೇಗೆ ತಾಳಲಾರದೆ ಸಾವಿರಾರು ಮೀನುಗಳು ಅಸು ನೀಗುತ್ತಿವೆ.

ಗ್ರಾಮದ ಹೊರ ಭಾಗದಲ್ಲಿ ಸುಮಾರು 21 ಎಕರೆ ವಿಸ್ತೀರ್ಣದಲ್ಲಿರುವ ಕೆರೆಗೆ ಕಳೆದ ವರ್ಷ ಸಾವಿರಾರು ಮೀನು ಮೀರಿಗಳನ್ನು ಬಿಡಲಾಗಿತ್ತು. ಎಲ್ಲ ಮೀನುಗಳು ಇದೀಗ ದೊಡ್ಡದಾಗಿ ಬೆಳವಣಿಗೆ ಕಂಡಿದ್ದವು. ಬರಗಾಲದ ಕಾರಣ ಕೆರೆಯಲ್ಲಿ ನೀರು ಬತ್ತಿ ಹೋಗಿದ್ದು ಮೀನುಗಳು ಸತ್ತು ತೇಲಾಡುತ್ತಿವೆ.

ಕೆರೆ ಒಡಲು ಸಾಕಷ್ಟು ಪ್ರಮಾಣದಲ್ಲಿ ಖಾಲಿಯಾಗಿದ್ದು, ಅಪಾರ ಬೆಲೆ ಬಾಳುವ ಮೀನುಗಳು ಸಾಯಲು ಕಾರಣವಾಗಿದೆ. ಮೀನುಗಳು ಸತ್ತು ತೇಲುತ್ತಿರುವುದರಿಂದ ದುರ್ವಾಸನೆ ಬರುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.