
ಪ್ರಜಾವಾಣಿ ವಾರ್ತೆ
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ದೊಡ್ಡಕರಡೇವು ಗ್ರಾಮದ ಮನೆಯ ಲಾಕರ್‌ನಲ್ಲಿಟ್ಟಿದ್ದ ₹18.94 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಗ್ರಾಮದ ವಿನಿತ್ ಅವರು ದೀಪಾವಳಿ ಹಬ್ಬ ಮತ್ತು ಧನಲಕ್ಷ್ಮಿ ಪೂಜೆ ಪ್ರಯುಕ್ತ ಚನ್ನರಾಯಪಟ್ಟಣದ ಸಿಂಡಿಕೇಟ್ ಬ್ಯಾಂಕ್‍ನ ಲಾಕರ್‌ನಲ್ಲಿದ್ದ ಚಿನ್ನದ ಆಭರಣಗಳನ್ನು ಬಿಡಿಸಿಕೊಂಡು ಮನೆಯ ಲಾಕರ್‌ನಲ್ಲಿ ಇಟ್ಟಿದ್ದರು.
ನ.7 ರಂದು ವಿನಿತ್ ಅವರ ತಮ್ಮ ಹಾಗೂ ಅವರ ಪತ್ನಿಯನ್ನು ಬೆಂಗಳೂರಿಗೆ ಕಳುಹಿಸುವ ಸಂದರ್ಭದಲ್ಲಿ ಚಿನ್ನಾಭರಣಗಳನ್ನು ಕೊಡಲು ಲಾಕರ್ ತೆರೆದಿದ್ದಾರೆ. ಆದರೆ, ಸುಮಾರು 398 ಗ್ರಾಂ ವಿವಿಧ ಚಿನ್ನಾಭರಣಗಳು ಇರಲಿಲ್ಲ. ಕಳ್ಳರು ಕೋಣೆ ಮತ್ತು ಲಾಕರ್‌ನ ಕೀಗಳನ್ನು ಬಳಸಿಕೊಂಡು ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.