
ಹಗರೆ (ಹಳೇಬೀಡು): ‘ದುಶ್ಚಟಕ್ಕೆ ಬಲಿಯಾಗದಿದ್ದರೆ ಕುಟುಂಬ ಅಭಿವೃದ್ಧಿ ಆಗುವುದರ ಜೊತೆಗೆ ನೆಮ್ಮದಿ ಕಾಣಬಹುದು’ ಎಂದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನಾಧಿಕಾರಿ ಟಿ.ಆರ್.ಮಂಜುಳಾ ಹೇಳಿದರು.
ಹಗರೆ ಗ್ರಾಮದ ಸತ್ಯನಾರಾಯಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಾನುವಾರ ನಡೆದ 2033ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮದ್ಯದಂಗಡಿ ಮುಚ್ಚಿಸಲು ಸಾಧ್ಯವಿಲ್ಲ, ಆದರೆ ಮದ್ಯದ ವ್ಯಸನಕ್ಕೆ ಬಲಿಯಾದವರನ್ನು ಮನಃಪರಿವರ್ತನೆ ಮಾಡಿದರೆ, ಕುಟುಂಬದ ಚಿತ್ರಣ ಬದಲಾಗುತ್ತದೆ. ಅಂತಹ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ’ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶಿವರಾಜ್ ಉದ್ಘಾಟಿಸಿದರು. ಶಿಬಿರದ ಅಧ್ಯಕ್ಷ ಎಚ್.ಡಿ.ಮೋಹನ್ ಅಧ್ಯಕ್ಷತೆ ವಹಿಸಿದ್ದರು.
ಜ್ಞಾನ ದೀವಿಗೆ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಟಿ.ಮಂಜೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಾಂತರಾಜು ಎಚ್.ಎಂ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಯಿ ಮುದ್ದು, ಮಾಜಿ ಅಧ್ಯಕ್ಷರಾದ ಡಿಶಾಂತ್ ಕುಮಾರ್, ಶೇಖರ್ ಗೌಡ, ಛಾಯಾಗ್ರಾಹಕ ಕೆ.ಪಿ.ಪೃಥ್ವಿ ವೈದ್ಯ ಡಾ ಪ್ರಸನ್ನ, ಜಿಲ್ಲಾ ಜನಜಾಗೃತಿ ಸದಸ್ಯರಾದ ದಯಾನಂದ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಚೇತನ್, ಜಿಲ್ಹಾ ಜನಜಾಗೃತಿ ಸಮಿತಿಯ ಉಪಾಧ್ಯಕ್ಷ ಡಿ.ಎಲ್.ಸೋಮಶೇಖರ್, ನಿವೃತ ಎಂಜಿನಿಯರ್ ವೆಂಕಟೇಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.