ADVERTISEMENT

ಹಾಸನ ನಗರಸಭೆ ಅಕ್ರಮ: ಕ್ರಮಕ್ಕೆ ಎಚ್.ಡಿ.ರೇವಣ್ಣ ಒತ್ತಾಯ

ಶಾಸಕ ಎಚ್.ಡಿ.ರೇವಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 15:28 IST
Last Updated 28 ಮಾರ್ಚ್ 2022, 15:28 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ‘ನಗರಸಭೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮುಖ್ಯಮಂತ್ರಿಮತ್ತು ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು. ಕ್ರಮಕೈಗೊಳ್ಳದಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು’ ಎಂದು ಶಾಸಕ ಎಚ್.ಡಿ.ರೇವಣ್ಣ ಎಚ್ಚರಿಸಿದರು.

‘ಹಿಂಬಾಗಿಲ ಮೂಲಕ ನಗರಸಭೆ ಅಧಿಕಾರ ಹಿಡಿದವರು ಭ್ರಷ್ಟಾಚಾರದಲ್ಲಿತೊಡಗಿದ್ದಾರೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಜಿಲ್ಲಾಧಿಕಾರಿ ಸೂಕ್ತಕ್ರಮ ಕೈಗೊಳ್ಳಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮಾರ್ಚ್ 30ರಂದು ಗೊರೂರಿನಲ್ಲಿ ಬಜೆಟ್ ಸಾಮಾನ್ಯ ಸಭೆ ಕರೆದಿರುವುದುಸರಿಯಲ್ಲ. ಈ ಬಗ್ಗೆ ಡಿ.ಸಿ.ಗೆ ದೂರು ನೀಡಲಾಗಿದ್ದು, ಅವರು ಏನು ಕ್ರಮಕೈಗೊಳ್ಳುತ್ತಾರೋ ನೋಡೋಣ. ಅಂದಿನ ಸಭೆಯಲ್ಲಿ ಜೆಡಿಎಸ್‌ ಸದಸ್ಯರು
ಭಾಗಿಯಾಗಬೇಕೋ, ಬೇಡವೋ ಎಂಬುದನ್ನು ಶೀಘ್ರ ತೀರ್ಮಾನಿಸಲಾಗುವುದು’ ಎಂದರು.

ADVERTISEMENT

‘ನಗರದಲ್ಲಿ ಅವೈಜ್ಞಾನಿಕವಾಗಿ ರಸ್ತೆ ಹಾಗೂ ಉದ್ಯಾನದಲ್ಲಿ ಕಾಮಗಾರಿಕೈಗೊಳ್ಳಲಾಗಿದೆ. ಉದ್ಯಾನದಲ್ಲಿ ಕಟ್ಟಡ ಯಾಕೆ ಬೇಕು? ಅಧಿಕಾರ ಯಾರಿಗೂಶಾಶ್ವತವಲ್ಲ. ಇದನ್ನು ಸರಿಪಡಿಸದೇ ಇದ್ದರೆ ಡಿ.ಸಿ ಸೇರಿದಂತೆ ಎಲ್ಲರ ವಿರುದ್ಧ
ದೂರು ನೀಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಮುಂದಿನದಿನಗಳಲ್ಲಿ ಅಕ್ರಮಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ.ಹೇಮಗಂಗೋತ್ರಿ ಎದುರು ಟ್ರಕ್ ಟರ್ಮಿನಲ್ ನಿರ್ಮಿಸುವುದು ಬೇಡ.ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಬೇರೆಡೆ 20 ಎಕರೆ ಜಾಗಗುರುತಿಸಿ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.

‘ಲೋಕೋಪಯೋಗಿ ಇಲಾಖೆಯಲ್ಲಿ ಹಿರಿತನದ ಪ್ರಕಾರ ಬಿಲ್ ಮಾಡುತ್ತಿಲ್ಲ.ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ ಮಾಡುವುದು ಸರಿಯಲ್ಲ. ಕ್ರೀಡಾಂಗಣ ಅಭಿವೃದ್ಧಿಗೆ ₹10 ಕೋಟಿ ಅನುದಾನ ಕೊಡಿಸಿದೆ. ಅಭಿವೃದ್ಧಿಗೆ ಅಡೆತಡೆ ಮಾಡಬಾರದು ಎಂಬ ಕಾರಣಕ್ಕೆ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಹಲವು ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಕೊಡಿಸಿದ್ದೆ. ಆದರೆ ಹಣ ಲೂಟಿ ಮಾಡುವುದನ್ನು ಸಹಿಸಲು ಆಗಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.