ADVERTISEMENT

ಹಾಸನ: ಸಾವಿಗೂ ಕರಗದ ಆಡಳಿತ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 5:08 IST
Last Updated 8 ಜೂನ್ 2019, 5:08 IST
ಹೆತ್ತೂರು ಹೋಬಳಿಯ ಜಾಗಾಟ ಗ್ರಾಮಸ್ಥರು ಬಳಸುತ್ತಿರುವ ಕಾಲು ಸಂಕ (ಮೆಟ್ಟು).
ಹೆತ್ತೂರು ಹೋಬಳಿಯ ಜಾಗಾಟ ಗ್ರಾಮಸ್ಥರು ಬಳಸುತ್ತಿರುವ ಕಾಲು ಸಂಕ (ಮೆಟ್ಟು).   

ಹಾಸನ: ಕಳೆದ ವರ್ಷ ಸಕಲೇಶಪುರ ತಾಲ್ಲೂಕಿನ ಐಗೂರಿನಿಂದ ಚಿಕ್ಕಂದೂರು ಗ್ರಾಮಕ್ಕೆ ಹೋಗುವಾಗ ಹೇಮಾವತಿ ನದಿಯಲ್ಲಿ ಹರಿಗೋಲು ಮಗುಚಿ ಮಹಿಳೆ ಮೃತಪಟ್ಟಿದ್ದರು.

ಮಲೆನಾಡಿನಲ್ಲಿ ಜೋರು ಮಳೆ ಬಂದಾಗ ಸಂಪರ್ಕ ಸೇತುವೆ ಮುಚ್ಚಿ ಹೋದಾಗ ಜನರು ಹರಿಗೋಲು ಬಳಸುತ್ತಾರೆ. ಈ ಘಟನೆ ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರ ಗಮನಕ್ಕೆ ಬಂದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ.

ಹೆತ್ತೂರು ಹೋಬಳಿಯ ಜಾಗಾಟ ಮತ್ತು ಕೂರ್ಕ ಮನೆ ಗ್ರಾಮದವರು ತಮ್ಮ ಜಮೀನು ಹಾಗೂ ಪಟ್ಟಣಕ್ಕೆ ಹೋಗಲು ‘ಕಾಲು ಸಂಕ’ (ಮೆಟ್ಟು) ಬಳಸುತ್ತಿದ್ದಾರೆ.

ADVERTISEMENT

ಮಳೆಗಾಲದಲ್ಲಿ ಹಳ್ಳಗಳು ತುಂಬಿ ಹರಿಯುವುದರಿಂದ ಜಮೀನುಗಳಿಗೆ ಹೋಗಲು ತಾವೇ ಕಾಲು ಸಂಕ ನಿರ್ಮಿಸಿಕೊಳ್ಳುತ್ತಾರೆ. ಜೋರು ಮಳೆಗೆ ಈ ಸಂಕವೂ ಮುಚ್ಚಿ ಹೋಗಿ ಹೊರ ಜಗತ್ತಿನ ಸಂಪರ್ಕವೇ ಕಡಿತಗೊಳ್ಳುತ್ತದೆ. ಜಮೀನಿಗೆ ಹೋಗಲು ನೀರಿನ ಮಟ್ಟ ಕಡಿಮೆ ಆಗುವ ತನಕ ಕಾಯಬೇಕು. ಗ್ರಾಮಸ್ಥರು ಹಳ್ಳ ದಾಟುವಾಗ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿರುವ ನಿದರ್ಶನವೂ ಉಂಟು.

‘ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ಶಾಸಕರ ಗಮನಕ್ಕೂ ತರಲಾಗಿತ್ತು. ಭರವಸೆ ಈಡೇರಿಲ್ಲ. ಹೀಗಾಗಿ, ಗ್ರಾಮಸ್ಥರೇ ಮೆಟ್ಟು ನಿರ್ಮಿಸಿಕೊಳ್ಳುತ್ತಾರೆ’ ಎಂದು ಗ್ರಾಮಸ್ಥ ಪ್ರವೀಣ್‌ ಹೇಳಿದರು.

‘ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಮಳೆ ಹಾನಿ ಪರಿಹಾರ ಕಾಮಗಾರಿಯಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಉಜ್ಮಾ ರಿಜ್ವಿ ಸುದರ್ಶನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.