ADVERTISEMENT

ಹಾಸನ: ₹4.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 1:59 IST
Last Updated 19 ಸೆಪ್ಟೆಂಬರ್ 2025, 1:59 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಹಾಸನ: ಇಲ್ಲಿನ ಚನ್ನಪಟ್ಟಣದ ಕೆಎಂಎಫ್‌ ವಸತಿ ಗೃಹದ ಬಾಗಿಲು ಮುರಿದು ₹4.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಪವಿತ್ರಾ ಅವರು ಸೆ.16 ರಂದು ಮನೆಗೆ ಬೀಗ ಹಾಕಿ, ಕುಟುಂಬ ಸಮೇತವಾಗಿ ತವರು ಮನೆಗೆ ಹೋಗಿದ್ದರು. ರಾತ್ರಿ ಅಲ್ಲಿಯೇ ಉಳಿದುಕೊಂಡು, ಸೆ.17 ರಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ, ಬಾಗಿಲನ್ನು ಒಡೆಯಲಾಗಿತ್ತು.

ದಿವಾನ್ ಕಾಟ್‌ನ ಕ್ಯಾಬಿನ್‌ನಲ್ಲಿ ಬ್ಯಾಗಿನಲ್ಲಿಟ್ಟಿದ್ದ ಒಟ್ಟು ಸುಮಾರು 97 ಗ್ರಾಂ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ. ಹಾಸನದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

7 ಸಿಂದಿ ಕರು ರಕ್ಷಣೆ: ಆರೋಪಿ ಬಂಧನ

ಹಾಸನ: ಅರಸೀಕೆರೆ ತಾಲ್ಲೂಕಿನ ಗಂಡಸಿ ಠಾಣೆ ವ್ಯಾಪ್ತಿಯ ಹುರುಗಿನವಾಡಿ ಗ್ರಾಮದಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ 7 ಸಿಂದಿ ಕರುಗಳನ್ನು ರಕ್ಷಣೆ ಮಾಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ಮಹಮ್ಮದ್ ರಫೀಕ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಗಂಡಸಿಯ ಅಪ್ಪಯ್ಯ ಹಾಗೂ ಮಾಗಡಿ ತಾಲ್ಲೂಕಿನ ಲಾಯ ಗ್ರಾಮದ ಅಹಮ್ಮದ್ ಪಾಷಾ ಪರಾರಿಯಾಗಿದ್ದಾರೆ.

ಸಿಂದಿ ಕರುಗಳನ್ನು ವಾಹನಗಳಲ್ಲಿ ತುಂಬುತ್ತಿದ್ದಾಗ, ಗಂಡಸಿ ಸಬ್‌ ಇನ್‌ಸ್ಪೆಕ್ಟರ್‌ ಆರತಿ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.