
ಪ್ರಜಾವಾಣಿ ವಾರ್ತೆ
ಚನ್ನರಾಯಪಟ್ಟಣ (ಹಾಸನ ಜಿಲ್ಲೆ): ಇಲ್ಲಿನ ಕೋಟೆಯಲ್ಲಿ ಮಂಗಳವಾರ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವದ ವೇಳೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಕೋಲಾಟವಾಡಿ ಜನರಲ್ಲಿ ಹುರುಪು ತುಂಬಿದರು.
ರಥೋತ್ಸವದಲ್ಲಿ ಭಾರತೀಶ್ ಜನಪದ ತಂಡದ ಕಲಾವಿದರು ಕೋಲಾಟ ಪ್ರದರ್ಶಿಸಿದರು. ಕಲಾವಿದರೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಅವರೂ ಹೆಜ್ಜೆ ಹಾಕಿದರು.
ಜನಪದ ಹಾಡುಗಳ ಲಯಕ್ಕೆ ಅನುಗುಣವಾಗಿ ಕೋಲುಗಳನ್ನು ಬಡಿಯುತ್ತ, ಮಿತ ಕುಣಿತದ ಹೆಜ್ಜೆಯಿಟ್ಟರು. ರಥೋತ್ಸವದಲ್ಲಿ ಸೇರಿದ ಜನರಿಗೆ ಇದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.