ADVERTISEMENT

ಹಿರೀಸಾವೆ | ಶಾಲೆ, ದೇವಸ್ಥಾನದಿಂದ ಜಾಗೃತಿ: ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 2:45 IST
Last Updated 7 ಆಗಸ್ಟ್ 2025, 2:45 IST
ಹಿರೀಸಾವೆ ಹೋಬಳಿಯ ಸೋರೆಕಾಯಿಪುರದಲ್ಲಿ ಮಲ್ಲಿಗಮ್ಮ, ದುರ್ಗಮ್ಮ, ಮುನೇಶ್ವರ ಹಾಗೂ ಮಾರಿಯಮ್ಮ ದೇವಾಲಯಗಳ ಲೋಕಾರ್ಪಣೆ ಪ್ರಯುಕ್ತ ಬುಧವಾರ ಪೂರ್ಣ ಕುಂಭಗಳ ಮೆರವಣಿಗೆ ನಡೆಯಿತು 
ಹಿರೀಸಾವೆ ಹೋಬಳಿಯ ಸೋರೆಕಾಯಿಪುರದಲ್ಲಿ ಮಲ್ಲಿಗಮ್ಮ, ದುರ್ಗಮ್ಮ, ಮುನೇಶ್ವರ ಹಾಗೂ ಮಾರಿಯಮ್ಮ ದೇವಾಲಯಗಳ ಲೋಕಾರ್ಪಣೆ ಪ್ರಯುಕ್ತ ಬುಧವಾರ ಪೂರ್ಣ ಕುಂಭಗಳ ಮೆರವಣಿಗೆ ನಡೆಯಿತು    

ಹಿರೀಸಾವೆ: ಶಾಲೆಯಿಂದ ಶಿಕ್ಷಣ ಮತ್ತು ದೇವಸ್ಥಾನಗಳಿಂದ ಧರ್ಮ ಸಂಸ್ಕೃತಿ, ಸಂಸ್ಕಾರ ಬೆಳೆಯುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ  ಹೇಳಿದರು.

ಹೋಬಳಿಯ ಸೋರೆಕಾಯಿಪುರದಲ್ಲಿ ಬುಧವಾರ ಮಲ್ಲಿಗಮ್ಮ, ದುರ್ಗಮ್ಮ, ಮುನೀಶ್ವರ ಹಾಗೂ ಮಾರಿಯಮ್ಮ ನೂತನ ದೇವಾಲಯಗಳಲ್ಲಿ ದೇವರ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.

ಗ್ರಾಮದಲ್ಲಿ ದೇಗುಲ ಹಾಗೂ ಶಾಲೆಯ ಗಂಟೆಯ ಶಬ್ದ ಮೊಳಗಿದಾಗ, ಜನರು ಎಚ್ಚರಿಕೆಯಿಂದ ಇರುತ್ತಾರೆ. ನಮ್ಮ ಸಂಸ್ಕೃತಿ, ಸನಾತನ ಧರ್ಮದ ತಳಹದಿಯ ಮೇಲೆ  ದೇಶದ ಅಸ್ತಿತ್ವ ನಿಂತಿದೆ ಎಂದರು.

ADVERTISEMENT

ದೇವಸ್ಥಾನದಲ್ಲಿ ಬೆಳಿಗ್ಗೆ ದುರ್ಗಾ, ಮೃತ್ಯುಂಜಯ ಹೋಮ  ಮತ್ತು ವಿಶೇಷ ಪೂಜೆ  ಜರುಗಿದವು. ವೀರಭದ್ರೇಶ್ವರ ಸ್ವಾಮಿ  ಉತ್ಸವ ಮೂರ್ತಿ ಮೆರವಣಿಗೆ , ಪೂರ್ಣ ಕುಂಭ , ವೀರಗಾಸೆ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆಯಿತು ಎಂದು ದೇವಸ್ಥಾನದ ಸಮಿತಿಯ ಪ್ರಮುಖರು ತಿಳಿಸಿದರು.

ಲೋಕಾರ್ಪಣೆ ಇಂದು

  ದೇವಸ್ಥಾನದ ಲೋಕಾರ್ಪಣೆ ಗುರುವಾರ ನಡೆಯಲಿದೆ. ಜನಪ್ರತಿನಿಧಿಗಳು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಸ್ಪರ್ಧೆ: ರಾತ್ರಿ ಪುರಷರಿಗೆ ವಾಲಿಬಾಲ್ ಹಗ್ಗಜಗ್ಗಾಟ ಗುಂಡು ಕಲ್ಲು ಎತ್ತುವುದು ಗುಂಡು ಎಸೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.