
ಹೊಳೆನರಸೀಪುರ: ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ವ್ಯಾಸಂಗ ಮಾಡಿದರೂ ಉತ್ತಮ ಅಂಕ ಮತ್ತು ಜ್ಞಾನದಿಂದ ಅನಿರೀಕ್ಷಿತ ಮಟ್ಟವನ್ನು ತಲುಪಲು ಸಾಧ್ಯ. ವಾರ್ಷಿಕ ಪರೀಕ್ಷೆge ನಿರಂತರ ಅಭ್ಯಾಸ ಮಾಡಿ ಎಂದು ನಿವೃತ್ತ ಪ್ರಾಂಶುಪಾಲ ಪುಟ್ಟಸೋಮಪ್ಪ ಸಲಹೆ ನೀಡಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ನಮನ ಸಂಗಮ, ಪ್ರತಿಭಾ ಪುರಸ್ಕಾರ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಕನಸ್ಸು ಕಾಣುತ್ತಿರುತ್ತಾರೆ. ನೀವು ಪಡೆಯುವ ಅಂಕ ಹಾಗೂ ಸ್ಥಾನಮಾನವನ್ನು ಎಲ್ಲರೂ ಸಂಭ್ರಮಿಸಲು ಸಾಧ್ಯ. ಮೊಬೈಲ್ ಫೋನ್ ಇಂಟರ್ನೆಟ್ ಜಾಲತಾಣ ತ್ಯಜಿಸಿ, ಕಲಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿ.ಆರ್.ದೇವರಾಜ್ ಮಾತನಾಡಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಚ್.ಡಿ. ರೇವಣ್ಣ ಕಾಲೇಜಿನ ಸಮಸ್ಯೆ ಅಥವಾ ಶೈಕ್ಷಣಿಕ ಪ್ರಗತಿಗೆ ತಕ್ಷಣ ಸ್ಪಂದಿಸುವ ಮನೋಭಾವದಿಂದಾಗಿ ಉತ್ತಮ ಕಟ್ಟಡ, ಪ್ರಯೋಗಾಲಯ, ಗಣಕ ಯಂತ್ರಗಳು ಹಾಗೂ ಸೌಲಭ್ಯಗಳು ಲಭಿಸಿವೆ ಎಂದರು.
ದ್ವಿತೀಯ ಪಿಯುಸಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ₹50 ಸಾವಿರ ಮತ್ತು 2 ರಿಂದ 10ನೇ ಸ್ಥಾನದೊಳಗೆ ಸ್ಥಾನ ಪಡೆದರೂ ₹25 ಸಾವಿರ ಬಹುಮಾನವನ್ನು ವೈಯಕ್ತಿಕವಾಗಿ ನೀಡುತ್ತೇನೆ ಎಂದು ಘೋಷಿಸಿದರು.ಹಾಸನದ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಮಕೃಷ್ಣ ಕುಟುಂಬ ನೀಡುತ್ತಿರುವ ಅನಂತ್ ಸ್ಕಾಲರ್‌ಶಿಪ್ ವಿದ್ಯಾರ್ಥಿನಿಯರಿಗೆ ವಿತರಿಸಿದರು. ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿ, ಅಭಿನಂದಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎ.ಜಗನ್ನಾಥ್, ಮಂಜುನಾಥ್, ಚಂದ್ರಶೇಖರ್ ಎಚ್.ವೈ., ಎಂ..ಎನ್. ಜೈಪ್ರಕಾಶ್, ಉಪನ್ಯಾಸಕರಾದ ಸುದರ್ಶನ್, ರಾಘವೇಂದ್ರನ್ ಎಚ್.ಎನ್., ಶ್ರೀನಿವಾಸ್ ಕೆ.ಪಿ., ಕಾಂತರಾಜು, ಅವಿನಾಶ್, ಪವಿತ್ರಾ, ವಾಣಿ, ವೀಣಾ, ಲೋಹಿತಾಶ್ವ, ನಟರಾಜು, ದ್ರಾಕ್ಷಾಯಿಣಿ, ಉಪನ್ಯಾಸಕಿ ನಿರ್ಮಲಾ ಎಸ್., ಜೀವಿತಾ ಎಚ್.ವೈ., ಲಕ್ಷ್ಮಿ, ಅಮೃತ, ವರುಣ ಹಾಗೂ ಬಿಂದು, ವಿನುತಾ ಹಾಗೂ ನಿರೀಕ್ಷಾ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.