ADVERTISEMENT

ರಸ್ತೆಲಿ ಸಿಕ್ಕ ಚಿನ್ನದ ಸರ ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ KSRTC ಚಾಲಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:34 IST
Last Updated 26 ಫೆಬ್ರುವರಿ 2026, 6:34 IST
<div class="paragraphs"><p>ksrtc</p></div>

ksrtc

   

ಹೊಳೆನರಸೀಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕದ ಚಾಲಕ ಧರ್ಮ ಅವರಿಗೆ ರಸ್ತೆಯಲ್ಲಿ ಸಿಕ್ಕ 38 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ತೋರಿ, ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಧರ್ಮ ಅವರು ಕರ್ತವ್ಯ ನಿರ್ವಹಿಸಿ ಮನೆಗೆ ಹಿಂದಿರುಗುವಾಗ ಸಂಜೆ 6 ಗಂಟೆಗೆ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಇರುವ ನರ್ಸಿಂಗ್ ಕಾಲೇಜ್ ರಸ್ತೆಯಲ್ಲಿ  ಚಿನ್ನದ ಮಾಂಗಲ್ಯ ಸರ ಬಿದ್ದಿರುವುದನ್ನು ಗಮನಿಸಿ, ತೆಗೆದುಕೊಂಡಿದ್ದಾರೆ.

ADVERTISEMENT

ನಂತರ 7 ಗಂಟೆಗೆ ಅದೇ ರಸ್ತೆಯಲ್ಲಿ ಬರುವಾಗ ಸರ ಕಳೆದುಕೊಂಡಿದ್ದ ಮಹಿಳೆಯ ಕುಟುಂಬ ಸದಸ್ಯರು ಹುಡುಕುತ್ತಿರುವುದನ್ನು ಕಂಡು ಸಂಪೂರ್ಣ ಮಾಹಿತಿ ಪಡೆದು, ಒಡವೆಯ ವಿವರ ಸರಿ ಕಂಡ ನಂತರ ಬಡಾವಣೆಯ ನಿವಾಸಿ ಹಾಗೂ ಕೆಎಂಎಫ್ ಘಟಕ ಒಂದರ ವ್ಯವಸ್ಥಾಪಕ ದಿನೇಶ್ ಅವರ ಸಮ್ಮಖದಲ್ಲಿ ಮಹಿಳೆಗೆ ಸರ ಹಿಂದಿರುಗಿಸಿದ್ದಾರೆ.

ಧರ್ಮ ಅತ್ಯುತ್ತಮ ಚಾಲಕ ಪ್ರಶಸ್ತಿಯನ್ನು ಪಡೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.