ಹಾಸನ: ‘ಮುಖ್ಯಮಂತ್ರಿ, ಸಚಿವರನ್ನು ನಮ್ಮ ಮನೆಗೆ ಬನ್ನಿ ಎಂದು ಕರೆದಿಲ್ಲ. ವಿರೋಧ ಪಕ್ಷಗಳ ನಾಯಕರ ಮನೆಗೆಭೇಟಿ ನೀಡಿದರೆ, ಅವರದ್ದೇ ಪಕ್ಷದ ನಾಯಕರಿಂದ ಅವರು ಬೈಯಿಸಿಕೊಳ್ಳಬೇಕಾಗುತ್ತದೆ’ ಎಂದು ರೇವಣ್ಣ ವ್ಯಂಗ್ಯವಾಡಿದರು.
ಸಿ.ಎಂ– ದೇವೇಗೌಡರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಶಾಸಕ ಪ್ರೀತಂ ಗೌಡ ಹೆಸರು ಪ್ರಸ್ತಾಪಿಸದೆ ಮಾತನಾಡಿದ ಅವರು, ‘ಸಿ.ಎಂ ಮತ್ತು ಸಚಿವರು ಇನ್ನು ಮುಂದೆ ಬಿಜೆಪಿ ನಾಯಕರ ಮನೆಗೆ ಹೋಗಿ, ಅವರಿಂದಲೇ ಏನುಬೇಕಾದರೂ ಪಡೆದುಕೊಳ್ಳಲಿ. ನಾನು 21 ವರ್ಷ ರಾಜಕೀಯ ಮಾಡಿದ್ದೇನೆ. ಸಾಕಷ್ಟು ನೋಡಿದ್ದೇನೆ.ಅಧಿಕಾರ ಎಂದಿಗೂ ಶಾಶ್ವತ ಅಲ್ಲ. ರಾಜಕಾರಣ ಇಲ್ಲಿಗೆ ಮುಗಿಯುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.