
ಹಿರೀಸಾವೆ: ಹಾಸನ ಜಿಲ್ಲಾ ಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ–75ರ ಕಿರೀಸಾವೆ ಗಡಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹಿರೀಸಾವೆಯಲ್ಲಿ ಮಂಗಳವಾರ ಹೇಳಿದರು.
ಇಲ್ಲಿನ ರಂಗಮಂಟಪದ ಬಳಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ಅವರು ಮಾತನಾಡಿದರು. ‘ನಮ್ಮ ಜಿಲ್ಲೆಗೆ ಹೆಮ್ಮೆ ತಂದಿರುವ ದೇವೇಗೌಡರಿಗೆ ಈ ಮೂಲಕ ಗೌರವ ಸಲ್ಲಿಸಬೇಕಿದೆ. ಇದಕ್ಕೆ ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು ಸಹಕಾರ ನೀಡಬೇಕು’ ಎಂದರು.
‘ಸರ್ಕಾರದಿಂದ ಅನುದಾನದ ಕೊರತೆ ಇದ್ದರೂ ಕ್ಷೇತ್ರ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೆಲಸ ಮಾಡಲಾಗುತ್ತಿದೆ. ಗ್ರಾಮದ ಚಿಕ್ಕ ಬೀದಿ, ಚೌಡೇಶ್ವರಿ ದೇವಸ್ಥಾನ, ದೊಡ್ಡ ಬೀದಿ, ಉಯ್ಯಾಲೆ ಕಂಬದ ಸುತ್ತ ಚರಂಡಿ ನಿರ್ಮಾಣದ ಕಾಮಗಾರಿ ಮುಗಿದಿದೆ. ಈಗ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿನ ಗಣಪತಿ ಪೆಂಡಾಲ್ ₹4 ಲಕ್ಷ ಮತ್ತು ಆಂಜನೇಯ ದೇವಸ್ಥಾನದ ಅಭಿವೃದ್ಧಿಗೆ ₹5 ಲಕ್ಷ ಅನುದಾನ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಹಿರೀಸಾವೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ರೈತ ಸಂಘದ ಕಟ್ಟಡ ಕಟ್ಟಲು 5 ಗುಂಟೆ ಭೂಮಿಯನ್ನು ಗುರುತಿಸಲಾಗಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ನೀಡಿದರ ಶೀಘ್ರ ಕೆಲಸ ಪ್ರಾರಂಭಿಸಲಾಗುವುದು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಸದಸ್ಯರಾದ ಸಂತೋಷ್, ಹೊನ್ನೇನಹಳ್ಳಿ ಲೋಕೇಶ್, ಪಿಎಸಿಸಿಬಿ ಅಧ್ಯಕ್ಷ ಮಹೇಶ್, ಮುಖಂಡರಾದ ರಾಮಕೃಷ್ಣ, ಪರಮದ ದೇವರಾಜೇಗೌಡ, ಅನಿಲ್, ರವಿಕುಮಾರ್, ಹೊಸಮನೆ ಚಂದ್ರು, ಡೈರಿ ಕುಮಾರ್, ಲೋಕೇಶ್, ಎಚ್.ಜಿ. ಮಂಜುನಾಥ್, ವೆಂಕಟೇಶ್, ರೋಡ್ ಮಂಜುನಾಥ್, ಬೋರೇಗೌಡ, ಉಯ್ಯಾಲೆ ಕುಮಾರ್, ರಂಜು, ಸಂದೀಪ್, ಪುರಿ ರಾಕೇಶ್, ಬಾಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.