ADVERTISEMENT

ಬಾಗೂರು | ಪಂಚಾಯಿತಿ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಎನ್. ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:07 IST
Last Updated 12 ನವೆಂಬರ್ 2025, 2:07 IST
ಬಾಗೂರು ಗ್ರಾಮ ಪಂಚಾಯಿತಿ ಹಾಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರೇಣುಕಾ ಕಾಳೇಶ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಮಂಗಳವಾರ ಬರಮಾಡಿಕೊಂಡರು 
ಬಾಗೂರು ಗ್ರಾಮ ಪಂಚಾಯಿತಿ ಹಾಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರೇಣುಕಾ ಕಾಳೇಶ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಮಂಗಳವಾರ ಬರಮಾಡಿಕೊಂಡರು    

ಬಾಗೂರು: ಮುಂಬರುವ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಸಜ್ಜಾಗುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಹಾಲಿ ಸದಸ್ಯೆ ರೇಣುಕಾ ಕಾಳೇಶ್ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಬಾಗೂ ಪಂಚಾಯಿತಿ ಹಾಲಿ ಸದಸ್ಯೆ ಕಾಂಗ್ರೆಸ್ ಬೆಂಬಲಿತ ರೇಣುಕಾ ಕಾಳೇಶ್ ಸೇರಿದಂತೆ 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗೂ ಪಕ್ಷ ಸಂಘಟಿಸಲು ಉತ್ತಮ ವೇದಿಕೆಯಾಗಿದೆ’ ಎಂದರು.

ADVERTISEMENT

ಮಾರ್ಚ್‌ನಲ್ಲಿ ಸಂತೆಕಾಳೇಶ್ವರಿ ಜಾತ್ರೆ ಹಾಗೂ ರಥೋತ್ಸವ ನಡೆಯುವುದರಿಂದ ಅಷ್ಟರೊಳಗೆ ರಥದ ಕೆಲಸ ಪೂರ್ಣಗೊಳಿಸುವಂತೆ ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ ಮಾತನಾಡಿದರು. ಎಪಿಎಂಸಿ ಮಾಜಿ ಮೂಡನಹಳ್ಳಿ ಚಂದ್ರಣ್ಣ, ವಿ.ಎನ್. ಮಂಜುನಾಥ್, ಉದ್ಯಮಿ ಅಣತಿ ಯೋಗೀಶ್, ತಾ.ಪಂ. ಮಾಜಿ ಸದಸ್ಯ ಓಬಳಾಪುರ ಬಸವರಾಜ್, ಮಾಜಿ ಉಪಾಧ್ಯಕ್ಷ ಮಲ್ಲೇಶ್, ಟಿಎಪಿಎಂಎಸ್ ನಿರ್ದೇಶಕ ಕುಂಬಾರಹಳ್ಳಿ ರಮೇಶ್, ಗ್ರಾ.ಪಂ. ಅಧ್ಯಕ್ಷ ಅಣ್ಣೇಗೌಡ, ಮಾಜಿ ಅಧ್ಯಕ್ಷರಾದ ಕೆಂಪೇಗೌಡ, ಬಿ.ಪಿ. ಲಕ್ಷ್ಮಣ್, ಸದಸ್ಯರಾದ ರಂಗಸ್ವಾಮಿ, ಎಲ್ಐಸಿ ಯೂನಿಯನ್ ಅಧ್ಯಕ್ಷ ಕಾಂತರಾಜ್, ಕೃಷಿ ಪತ್ತಿನ ನಿರ್ದೇಶಕ ಹರೀಶ್, ಅರ್ಚಕರಾದ ಕಾಳಪ್ಪ, ಸೋಮಶೇಖರ್, ನಿವೃತ್ತ ಸೈನಿಕರಾದ ಮಧು, ಸೋಮಶೇಖರ್, ರೂಪೇಶ್, ನಾರಾಯಣ್, ಮುಖಂಡರಾದ ಮನು, ಚಂದ್ರೇಗೌಡ, ಜಯರಾಮ್, ಚಿರಂಜೀವಿ, ಯುವ ಮುಖಂಡ ಧರಣೇಂದ್ರ ಇದ್ದರು.