ADVERTISEMENT

ಹೊಳೆನರಸೀಪುರದಲ್ಲಿ ಜೆಡಿಎಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 12:35 IST
Last Updated 14 ನವೆಂಬರ್ 2019, 12:35 IST
ಹೊಳೆನರಸೀಪುರ ಪುರಸಭೆಯ ವಾರ್ಡ್‌ ನಂ 4 ರಲ್ಲಿ ಜಯಗಳಿಸಿದ ಜೆಡಿಎಸ್‌ ಅಭ್ಯರ್ಥಿ ಎಚ್‌.ಆರ್‌.ಮಧು ಅವರನ್ನು ಮಡಿವಾಳರ ರಾಮಮಂದಿರಲ್ಲಿ ವಾರ್ಡಿನ ಮತದಾರರು ಅಭಿನಂದಿಸಿದರು
ಹೊಳೆನರಸೀಪುರ ಪುರಸಭೆಯ ವಾರ್ಡ್‌ ನಂ 4 ರಲ್ಲಿ ಜಯಗಳಿಸಿದ ಜೆಡಿಎಸ್‌ ಅಭ್ಯರ್ಥಿ ಎಚ್‌.ಆರ್‌.ಮಧು ಅವರನ್ನು ಮಡಿವಾಳರ ರಾಮಮಂದಿರಲ್ಲಿ ವಾರ್ಡಿನ ಮತದಾರರು ಅಭಿನಂದಿಸಿದರು   

ಹೊಳೆನರಸೀಪುರ: ಪುರಸಭೆಯ ವಾರ್ಡ್‌ ನಂ 4 ಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎಚ್‌.ಆರ್‌.ಮಧು 156 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ವಾರ್ಡ್‌ನಲ್ಲಿ 918 ಮತದಾರರಿದ್ದು ಅದರಲ್ಲಿ 619 ಮತಗಳು ಚಾಲಾವಣೆ ಗೊಂಡಿದ್ದವು. ಎಚ್‌.ಆರ್.ಮಧು 386, ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ನಗರಾಜೇಗೌಡ 230 ಮತಗಳನ್ನು ಪಡೆದಿದ್ದು 3 ಮತಗಳು ನೋಟಾಗೆ ಬಿದ್ದಿವೆ.

ನಾಗರಾಜೇಗೌಡ ಈ ಹಿಂದಿನ ಚುನಾವಣೆಗಿಂತ 102 ಮತಗಳನ್ನು ಹೆಚ್ಚಿಗೆ ಪಡೆದಿದ್ದು, ಈ ಬಾರಿ ಜೆಡಿಎಸ್‌ನ ಪುರಸಭಾ ಸದಸ್ಯರು, ಸಂಸದ, ಅಪಾರ ಕಾರ್ಯಕರ್ತರು ವಾರ್ಡ್‌ನಲ್ಲಿ ಬಿರುಸಿನ ಪ್ರಚಾರ ಮಾಡಿದ್ದರೂ ಜೆಡಿಎಸ್‌ಗೆ ಕಳೆದ ಬಾರಿಗಿಂತ ಕಡಿಮೆ ಮತಗಳು ಬಂದಿರುವುದು ಜೆಡಿಎಸ್‌ ಮುಖಂಡರ ಆತಂಕಕ್ಕೆ ಕಾರಣವಾಗಿದೆ.

ADVERTISEMENT

‘ವಾರ್ಡ್‌ನಲ್ಲಿ ಇಲ್ಲದ ಜೆಡಿಎಸ್ ಕಾರ್ಯಕರ್ತರ ಹೆಸರನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದರಿಂದ ನನಗೆ ಸೋಲಾಗಿದೆ. ನಮ್ಮ ವಾರ್ಡಿನ ಮತದಾರರು ಮಾತ್ರ ಮತದಾನ ಮಾಡಿದ್ದರೆ ನಾನೇ ಗೆಲ್ಲುತ್ತಿದ್ದೆ‘ ಎಂದು ನಾಗರಾಜೇಗೌಡ ತಿಳಿಸಿದ್ದಾರೆ.

‘ಕಾಂಗ್ರೆಸ್‌ ಮತ್ತು ಬಿಜೆಪಿ ಒಂದಾಗಿದ್ದರೂ ನಮ್ಮ ವಾರ್ಡಿನ ಜನ ನನ್ನನ್ನು ಗೆಲ್ಲಿಸಿದ್ದಾರೆ. ಇದು ನನ್ನ ಗೆಲುವಲ್ಲ ಜೆಡಿಎಸ್‌ನ ಗೆಲುವು’ ಎಂದು ವಿಜೇತ ಅಭ್ಯರ್ಥಿ ಮಧು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.