ಕಡತ
(ಸಾಂದರ್ಭಿಕ ಚಿತ್ರ)
ಹಾಸನ: ಇಲ್ಲಿನ ಮಾಣಿಕ್ಯ ಪ್ರಕಾಶನ ವಿವಿಧ ಕೃತಿಗಳಿಗೆ ಕೊಡಮಾಡುವ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ನವೆಂಬರ್ 2 ರಂದು ನಗರದ ಸಂಸ್ಕೃತ ಭವನದಲ್ಲಿ ನಡೆಯುವ ಪ್ರಕಾಶನದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
ಎನ್. ಶೈಲಜಾ ಹಾಸನ ದತ್ತಿ ಪ್ರಬಂಧ ಮಾಣಿಕ್ಯ ಪ್ರಶಸ್ತಿಗೆ ಧಾರವಾಡದ ಲತಾ ಹೆಗಡೆ ಅವರ ‘ಕೃಶಕಾಯದ ಕರಕರೆ’, ಧಾರವಾಡದ ನಳಿನಿ ಟಿ. ಭೀಮಪ್ಪ ಅವರ ‘ಐಸ್ ಪೈಸ್’ ಕೃತಿಗಳು ಭಾಜನವಾಗಿವೆ.
ದಿ.ಸಿ.ಪಿ. ನಾರಾಯಣಾಚಾರ್ಯ ಸ್ಮಾರಕ ದತ್ತಿ ಕಾವ್ಯ ಮಾಣಿಕ್ಯ ಪ್ರಶಸ್ತಿಗೆ ಧಾರವಾಡದ ಎ.ಎ. ದರ್ಗಾ ಅವರ ‘ಬೆಂದ ಬೆಳಸಿ’ ಹಾಗೂ ಚಿಕ್ಕಮಗಳೂರಿನ ಶಶಿ ತರೀಕೆರೆ ಅವರ ‘ಪ್ಯೂಪಾ’ ಕೃತಿಗಳು ಪ್ರಥಮ, ಮೈಸೂರಿನ ಎನ್.ಆರ್. ರೂಪಶ್ರೀ ‘ಕಾದ ಕಂಗಳ ಕಂಪನ’, ದಾವಣೆಗೆರೆಯ ಗೀತಾಮಂಜು ಬೆಣ್ಣೆಹಳ್ಳಿಯವರ ‘ಕಿರು ಬೆಳಕಿನ ಸೂಜಿ’ ಕೃತಿಗಳು ದ್ವಿತೀಯ ಬಹುಮಾನ ಪಡೆದಿವೆ.
ಪದ್ಮಾವತಿ ವೆಂಕಟೇಶ್ ದತ್ತಿ ಕಥಾ ಮಾಣಿಕ್ಯ ಪ್ರಶಸ್ತಿಗೆ ತುಮಕೂರಿನ ಹಡವನಹಳ್ಳಿ ವೀರಣ್ಣಗೌಡರ ‘ಉರಿವ ದೀಪದ ಕೆಳಗೆ’, ದಾವಣಗೆರೆಯ ಸುನೀತಾ ಪ್ರಕಾಶ್ ಅವರ ‘ಪದ್ದವ್ವನ ಕೌದಿ ಮತ್ತು ಇತರ ಕಥೆಗಳು’, ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ ಸಂಶೋಧನಾ ಮಾಣಿಕ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡದ ಸುಖಲಾಕ್ಷಿ ವೈ. ಸುವರ್ಣ ಅವರ ‘ಮುಂಬಯಿ ಮತ್ತು ಮಹಿಳೆ’, ಹಾಸನದ ಡಾ.ಹಂಪನಹಳ್ಳಿ ತಿಮ್ಮೇಗೌಡ ‘ದಾಸೊಕ್ಕಲಿಗರು’ ಕೃತಿಗಳು ಆಯ್ಕೆಯಾಗಿವೆ.
ಪ್ರಭಾವತಿ ಶೆಡ್ತಿ ದತ್ತಿ ನಾಟಕ ಮಾಣಿಕ್ಯ ಪ್ರಶಸ್ತಿಗೆ ಯಾದಗಿರಿಯ ಮಲ್ಲೇಶ ಬಿ. ಕೋನಾಳ ಅವರ ‘ಕಲ್ಯಾಣದ ಕ್ರಾಂತಿ’, ಧಾರವಾಡದ ಡಾ.ವೀಣಾ ಸಂಕನಗೌಡರ ಅವರ ‘ಮೂರು ಮತ್ತೊಂದು ನಾಟಕಗಳು’, ದಿ.ಮಹಾದೇವಮ್ಮ, ದಿ. ಈ. ಕೃಷ್ಣಯ್ಯ ಸ್ಮಾರಕ ದತ್ತಿ ಕಾದಂಬರಿ ಮಾಣಿಕ್ಯ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಉಳುವಂಗಡ ಕಾವೇರಿ ಉದಯ ಅವರ ‘ಪವಿತ್ರ ಪ್ರೀತಿ ಪ್ರಾಪ್ತಿ’, ಬೆಳಗಾವಿಯ ರಂಜಿತಾ ಮಹಾಜನ ಅವರ ‘ಬೇಲಿಯನ್ನು’, ದಿ. ಫಾತಿಮಾಬಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ ಗಜಲ್ ಮಾಣಿಕ್ಯ ಪ್ರಶಸ್ತಿಗೆ ಯಾದಗಿರಿಯ ಡಾ.ಸಿದ್ದರಾಮ ಹೊನ್ಕಲ್ ಅವರ ‘ನಿನ್ನ ಜೊತೆಜೊತೆಯಲಿ’, ಶಿವಮೊಗ್ಗದ ಯು. ಸಿರಾಜ್ ಅಹಮದ್ ಅವರ ‘ನೆಲ ನುಡಿದ ನಾದ’, ಕೆ.ವೈ. ಕಂದಕೂರ ದತ್ತಿ ಚುಟುಕು ಮಾಣಿಕ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡದ ಹಸೀನಾ ಮಲ್ನಾಡ್ ‘ಹನಿಗಡಲು’, ಬೆಳಗಾವಿ ಶ್ವೇತಾ ನರಗುಂದ ಅವರ ‘ಹಾಯ್ಕು ಹನಿ’, ದಿ. ದೊಡ್ಡಚಂದಪ್ಪ ತಳ್ಳಿ ಪಾಟೀಲ ಸ್ಮಾರಕದತ್ತಿ ವಚನ ಮಾಣಿಕ್ಯ ಪ್ರಶಸ್ತಿಗೆ ಬೀದರ ಜಯಶ್ರೀ ಸುಕಾಲೆ ಅವರ ‘ಶರಣ ಸೌರಭ’, ಹಾಸನದ ಸುಶೀಲಾ ಸೋಮಶೇಖರ್ ಅವರ ‘ವಚನ ಮಂದಾರ’ ಕೃತಿಗಳು ಆಯ್ಕೆಯಾಗಿವೆ.
ಸಾಹಿತಿಗಳಾದ ಡಾ. ರಂಜಾನ್ ದರ್ಗಾ, ಎನ್.ಶೈಲಜಾ ಹಾಸನ, ಕೊಟ್ರೇಶ್ ಎಸ್. ಉಪ್ಪಾರ್, ಟಿ.ಸತೀಶ್ ಜವರೇಗೌಡ, ಪ್ರಭಾವತಿ ಶೆಡ್ತಿ, ರೇಷ್ಮಾ ಕಂದಕೂರು, ಡಾ. ಅಮರೇಶ ಪಾಟೀಲ, ಡಾ. ವಿಶ್ವೇಶ್ವರ ಎನ್.ಮೇಟಿ, ಡಾ. ಎಚ್.ಕೆ. ಹಸೀನಾ, ಲತಾಮಣಿ ಎಂ.ಕೆ. ತುರುವೇಕೆರೆ, ಪದ್ಮಾವತಿ ವೆಂಕಟೇಶ್, ನೀಲಾವತಿ ಸಿ.ಎನ್., ಎಚ್.ಎಸ್.ಬಸವರಾಜ್, ನಾಗರಾಜ್ ದೊಡ್ಡಮನಿ, ವಾಸು ಸಮುದ್ರವಳ್ಳಿ, ದೇಸು ಆಲೂರು ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಕೃತಿಗಳನ್ನು ಆಯ್ಕೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.