ಹಾಸನ: ‘ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಮುಂದುವರಿದಿದ್ದು, ನವೆಂಬರ್ –ಡಿಸೆಂಬರ್ ವೇಳೆಗೆ ಸರ್ಕಾರ ಪತನವಾಗಲಿದೆ’ ಎಂದು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರುದ್ಧವಾದ ಹೇಳಿಕೆ ಕೊಡಿಸಿ ಒಬ್ಬ ಮಂತ್ರಿಯನ್ನು ಮನೆಗೆ ಕಳಿಸಿದ್ದಾರೆ. ಇದು ದಾರಿ ತಪ್ಪಿದ ಸರ್ಕಾರ’ ಎಂದು ಟೀಕಿಸಿದರು.
‘ಕಳೆದ ಎರಡೂವರೆ ವರ್ಷಗಳಿಂದ ಏನೂ ಅಭಿವೃದ್ಧಿ ಮಾಡದ ಸರ್ಕಾರ, ಈಗ ಆರ್‌ಎಸ್‍ಎಸ್ ಹೆಸರಿನಲ್ಲಿ ಹುಳುಕು ಮುಚ್ಚಿಕೊಳ್ಳಲು, ವೈಫಲ್ಯ ಮರೆಮಾಚಲು ಹುನ್ನಾರ ನಡೆಸಿದೆ’ ಎಂದರು.
‘ಬಿಜೆಪಿಯಿಂದ ಯಾರು ಕರೆ ಮಾಡಿದ್ದರು ಎಂಬುದನ್ನು ಡಿ.ಕೆ.ಶಿವಕುಮಾರ್ ಹೇಳಬೇಕು. ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಶಿವಕುಮಾರ್ ಸುಳ್ಳು ಹೇಳುತ್ತಿದ್ದಾರೆ’ ಎಂದೂ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.