ADVERTISEMENT

ಹಿರೀಸಾವೆ ತಲುಪಿದ ಕೆಂಪೇಗೌಡರ ಪುತ್ಥಳಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 12:42 IST
Last Updated 15 ಜನವರಿ 2025, 12:42 IST
ಹಿರೀಸಾವೆಗೆ ಬುಧವಾರ ಇಲ್ಲಿಗೆ ತಲುಪಿದ ಕೆಂಪೇಗೌಡರ ಕಂಚಿನ ಪುತ್ಥಳಿಗೆ ಸಮುದಾಯದ ಮುಖಂಡರು ಮತ್ತು ಹೋಬಳಿಯ ಕೆಂಪೇಗೌಡ ವೇದಿಕೆಯ ಪದಾಧಿಕಾರಿಗಳು  ಸ್ವಾಗತ ಕೋರಿದರು
ಹಿರೀಸಾವೆಗೆ ಬುಧವಾರ ಇಲ್ಲಿಗೆ ತಲುಪಿದ ಕೆಂಪೇಗೌಡರ ಕಂಚಿನ ಪುತ್ಥಳಿಗೆ ಸಮುದಾಯದ ಮುಖಂಡರು ಮತ್ತು ಹೋಬಳಿಯ ಕೆಂಪೇಗೌಡ ವೇದಿಕೆಯ ಪದಾಧಿಕಾರಿಗಳು  ಸ್ವಾಗತ ಕೋರಿದರು   

ಹಿರೀಸಾವೆ: ಇಲ್ಲಿನ ಶ್ರೀಕಂಠಯ್ಯ ವೃತ್ತಕ್ಕೆ ಬುಧವಾರ ತಲುಪಿದನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿಗೆ ಸಮುದಾಯದ ಮುಖಂಡರು, ಸಾರ್ವಜನಿಕರು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಭವ್ಯ ಸ್ವಾಗತ ಕೋರಿದರು.

ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, ಮುಂದಿನ ತಿಂಗಳು ಸಕಲೇಶಪುರದಲ್ಲಿ ನಾಡುಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿಯ ಲೋಕಾರ್ಪಣೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಸಹಯೋಗದಲ್ಲಿ ಮೂರು ದಿನದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.

ಕೆಂಪೇಗೌಡರ ಕಂಚಿನ ಪುತ್ಥಳಿಯ ದಾನಿ ಬಾಚಿಹಳ್ಳಿ ಪ್ರತಾಪ್‌ಗೌಡ ಮಾತನಾಡಿ, ಬಿಡದಿಯಲ್ಲಿ ಪ್ರತಿಮೆಯನ್ನು ಮಾಡಿಸಲಾಗಿದ್ದು,  ಸಕಲೇಶಪುರಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಆದಿಚುಂಚನಗಿರಿ ಮಠದಲ್ಲಿ  ನಿರ್ಮಲಾನಂದನಾಥ ಸ್ವಾಮೀಜಿ  ಪುತ್ಥಳಿಗೆ ಪುಷ್ಪಮಾಲೆ ತೊಡಿಸುವರು ಎಂದು ತಿಳಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಮಂಜುನಾಥ್, ಕೆಂಪೇಗೌಡ ವೇದಿಕೆಯ ಅಧ್ಯಕ್ಷ ಡಿಶ್ ರಾಜು, ಕಸಾಪ ಹೋಬಳಿ ಘಟಕದ ಮಾಜಿ ಅಧ್ಯಕ್ಷ ಪ್ರೋ ಎಚ್.ಪಿ. ಶಂಕರ್, ಕರವೆ ಯೋಗೇಶ್, ಮಹೇಶ್, ವಾಸು, ರಾಶೀಗೌಡ, ಮುಖಂಡರಾದ ಅರಳಿಮರದ ಕುಮಾರ್, ಚಂದ್ರಣ್ಣ, ಎಚ್.ಎಸ್. ಶ್ರೀಧರ್, ಹೊಸೂರು ಕುಮಾರ್, ಆರ್.ಕೆ. ಮಂಜುನಾಥ್  ಹೂವಿನ ಹಾರ ಹಾಕಿ, ಪುಷ್ಪವೃಷ್ಠಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.