ADVERTISEMENT

ಶಾಸಕರಿಬ್ಬರ ಹೆಸರಲ್ಲಿ ಮಸೀದಿಗಳಿಗೆ ಬೆದರಿಕೆ ಪತ್ರ: ಎಸ್‌ಪಿಗೆ ದೂರು

ಲಕೋಟೆಯಲ್ಲಿ ಬಳ್ಳಾರಿ ಶಾಸಕರ ಹೆಸರು ನಮೂದು

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 12:36 IST
Last Updated 18 ಜನವರಿ 2020, 12:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ನಗರದ ಹದಿನೈದು ಮಸೀದಿಗಳಿಗೆ ಶಾಸಕರಾದ ಸೋಮಶೇಖರ್‌ ರೆಡ್ಡಿ ಹಾಗೂ ಆನಂದ್‌ ಸಿಂಗ್‌ ಅವರ ಹೆಸರಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಬೆದರಿಕೆ ಹಾಕಿರುವ ಅಂಚೆ ಪತ್ರಗಳು ಶುಕ್ರವಾರ ತಲುಪಿವೆ.

ಲಕೋಟೆಯ ಮೇಲೆ ಸೋಮಶೇಖರ್‌ ರೆಡ್ಡಿ ಅವರ ಹೆಸರಿದ್ದು, ಪತ್ರದ ಕೊನೆಯಲ್ಲಿ ಆನಂದ್‌ ಸಿಂಗ್‌ ಹೆಸರಿನಲ್ಲಿ ಸಹಿ ಮಾಡಲಾಗಿದೆ.

ಈ ಸಂಬಂಧ ಮುಸ್ಲಿಂ ನಾಯಕರು ಶನಿವಾರ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ನಿವಾಸ ಸೆಪಟ್‌ ಅವರನ್ನು ಭೇಟಿ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ‘ಈ ಬಗ್ಗೆ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಮಾಡಲಾಗುವುದು’ ಎಂದು ಎಸ್‌ಪಿ ಭರವಸೆ ನೀಡಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುತ್ತಿರುವುದು ಖುಷಿ ಉಂಟು ಮಾಡಿದೆ. ಮುಸ್ಲಿಮರೆಲ್ಲ ಹಿಂದುಗಳಾಗಿ ಪರಿವರ್ತನೆಯಾಗಬೇಕು. ಮುಸ್ಲಿಮರ ಮನೆಯ ಹೆಣ್ಣು ಮಕ್ಕಳನ್ನು ಹಿಂದು ಯುವಕರಿಗೆ ಕೊಟ್ಟು ವಿವಾಹ ಮಾಡಬೇಕು. ಮಸೀದಿಗಳನ್ನೆಲ್ಲ ಹಿಂದು ದೇವಾಲಯಗಳಾಗಿ ಪರಿವರ್ತನೆ ಮಾಡಬೇಕು. ಮುಸ್ಲಿಮರು ಈ ದೇಶದಲ್ಲಿ ಉಳಿಯಬೇಕೆಂದರೆ ಹಿಂದೂ ಧರ್ಮ ಸ್ವೀಕರಿಸಬೇಕು. ಇಲ್ಲವಾದರೆ ದೇಶದಿಂದ ಹೊರಗೆ ಹೋಗಬೇಕಾಗುತ್ತದೆ’ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.