ಬೇಲೂರು (ಹಾಸನ): ತಾಲ್ಲೂಕಿನ ಗೆಂಡೇಹಳ್ಳಿ ಗ್ರಾಮದ ಸಮೀಪ, ಮಂಗಳವಾರ ಕಾಡುಕೋಣವೊಂದು ಕಾಣಿಸಿಕೊಂಡಿದೆ.
ಈಗಾಗಲೇ ಕಾಡಾನೆಗಳ ಉಪಟಳದಿಂದ ಬೇಸತ್ತ ಕಾಫಿ ಬೆಳೆಗಾರರು ಮತ್ತು ರೈತರು, ಇದೀಗ ಕಾಡುಕೋಣ ಪ್ರತ್ಯಕ್ಷವಾಗಿರುವುದರಿಂದ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
‘ಕಾಡಾನೆ, ಕಾಡುಹಂದಿ, ಮಂಗ, ನವಿಲುಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ. ಇದೀಗ ಕಾಡುಕೋಣವೂ ಬಂದಿದ್ದು, ಕಾಡಾನೆಗಳಿಗಿಂತ ಹೆಚ್ಚಿನ ತೊಂದರೆಯಾಗಲಿದೆ’ ಎಂದು ಕಾಫಿ ಬೆಳೆಗಾರ ಶ್ರೀನಿವಾಸ್ ಅಲವತ್ತುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.