ADVERTISEMENT

ಸೆಸ್ಕ್‌ ವಿದ್ಯುತ್ ಕರ ವಸೂಲಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 30 ಮೇ 2023, 14:47 IST
Last Updated 30 ಮೇ 2023, 14:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಲ್ಲೇಶ

ಬೇಲೂರು: ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆಯ ಆಶ್ವಾಸನೆಯಿಂದ ವಿದ್ಯುತ್ ಕರ ವಸೂಲಿಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡಿದೆ.

ಇಲ್ಲಿನ ಸೆಸ್ಕ್ ಕಚೇರಿಯಲ್ಲಿ ತಿಂಗಳಿಗೆ ಸರಾಸರಿ ₹ 1.10 ಕೋಟಿಯಿಂದ ₹1.20 ಕೋಟಿ ವಿದ್ಯುತ್ ಕರ ವಸೂಲಿಯಾಗುತ್ತಿತ್ತು, ಏಪ್ರಿಲ್ ತಿಂಗಳಿನಲ್ಲಿ ₹1.12 ಕೋಟಿ ವಸೂಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಾರಣ ಮೇ ತಿಂಗಳಿನಲ್ಲಿ‌ ₹ 98. 57 ಲಕ್ಷ ಹಣ ವಸೂಲಾಗಿದ್ದು, ಸುಮಾರು ₹ 14ಲಕ್ಷದಿಂದ ₹ 20 ಲಕ್ಷದವರೆಗೆ ಕಡಿಮೆಯಾಗಿದೆ.

ADVERTISEMENT

ಸರ್ಕಾರ 200 ಯೂನಿಟ್‌ಬರೆಗೆ ಉಚಿತ ಎಂದು ಹೇಳಿದೆ. ನೀವೆಕೆ ಬಂದು ಬಿಲ್ ಕೇಳುತ್ತಿದ್ದಿರಾ ಎಂದು ಜನರು ಬಿಲ್ ಕಲೆಕ್ಟರ್‌ಗಳನ್ನು ದಬಾಯಿಸುತ್ತಿದ್ದಾರೆ. ವ್ಯಾಪಾರಕ್ಕಾಗಿ ವಿದ್ಯುತ್ ಬಳಸುತ್ತಿರುವವರು ಸಹ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನುಡಿದಂತೆ ಐದು ಗ್ಯಾರಂಟಿಗಳನ್ನು ನೀಡಬೇಕು. ಗ್ಯಾರಂಟಿ ಜಾರಿಗೊಳಿಸಲು ಈಗ ನಿಬಂಧನೆಗಳನ್ನು ಹೇರಲು ಹೋರಾಟಿರುವುದು ಸರಿಯಲ್ಲ.
ಬಿ.ಸಿ. ಉಮೇಶ್, ಯುವ ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ

ಗ್ರಾಹಕರಿಗೆ ಸಮಜಾಯಿಷಿ ನೀಡಿ, ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಬಂದ ನಂತರ ಬಿಲ್ ಕೇಳುವುದಿಲ್ಲ ಎಂದು ತಿಳಿಸಿ, , ಬಿಲ್ ಪಡೆಯುವಷ್ಟರಲ್ಲಿ ಬಿಲ್ ಕಲೆಕ್ಟರ್‌ಗಳು ಹೈರಾಣಾಗಿ ಹೋಗುತ್ತಿದ್ದಾರೆ. ಕೆಲವರು ಬಿಲ್‌ ಸಹ ಪಡೆಯುತ್ತಿಲ್ಲ. ಮತ್ತೆ ಕೆಲವರು ಉಚಿತ ವಿದ್ಯುತ್‌ ಸಿಗುವುದರಿಂದ ಮೀಟರ್ ಅವಶ್ಯಕತೆ ಇಲ್ಲ. ಮೀಟರ್ ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ.

ಗೃಹಲಕ್ಷ್ಮೀ ಗೃಹಜ್ಯೋತಿ ಉಚಿತ ಪ್ರಯಾಣದ ಜಾರಿಗೆ ಬರುತ್ತದೆ ಎಂಬ ದೃಷ್ಟಿಯಿಂದ ಮಹಿಳೆಯರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. 15 ದಿನ ಕಳೆದರೂ ಯೋಜನೆ ಜಾರಿಗೆ ತರದಿರುವುದು ಬೇಸರ ತಂದಿದೆ.
ನಂದಿನಿ ಇಂಟಿತೊಳಲು, ಗ್ರಾಮದ ಗೃಹಿಣಿ

‘ಸರ್ಕಾರದಿಂದ ಇನ್ನೂ ಯಾವುದೇ ಆದೇಶ ಬಂದಿಲ್ಲ‌. ಅಲ್ಲಿಯವರೆಗೆ ಗ್ರಾಹಕರು ಬಿಲ್ ಪಾವತಿಸಬೇಕು. ನಾವು ಕೆಪಿಟಿಸಿಎಲ್‌ಗೆ ಹಣ ನೀಡಿ ವಿದ್ಯುತ್ ಕೊಂಡುಕೊಳ್ಳುತ್ತಿದ್ದು, ಅವರಿಗೆ ಹಣ ಕೊಡಲು ಕಷ್ಟವಾಗುತ್ತಿದೆ’ ಎಂದು ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಮ್ಮ ಮನವಿ ಮಾಡಿದ್ದಾರೆ.

ಉಮೇಶ್‌
ನಂದಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.