ಹೊಳೆನರಸೀಪುರ: ತಾಲ್ಲೂಕಿನ ಪಿಎಲ್‍ಡಿ ಬ್ಯಾಂಕ್ ಆಡಳಿತದ ಅಧಿಕಾರ ಜೆಡಿಎಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ.
ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ಫೆಬ್ರವರಿ 9ರಂದು ನಡೆದಿತ್ತು. 14 ಸದಸ್ಯರು ಚುನಾವಣೆಗೆ ಸ್ಪರ್ಧಿಸಿದ್ದು, ಅದರಲ್ಲಿ ಜೆಡಿಎಸ್ ಬೆಂಬಲಿತ 7 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ 6 ಅಭ್ಯರ್ಥಿಗಳು ಜಯಗಳಿಸಿದ್ದರು. ಮತ್ತೊಂದು ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಸಮಾನ ಮತ ಪಡೆದಿದ್ದರು.
ಕಾಂಗ್ರೆಸ್ ಪಕ್ಷದವರು 100ಕ್ಕೂ ಹೆಚ್ಚು ಮತ ಸೇರಿಸಿದ್ದಾರೆ ಎಂದು ಆಕ್ಷೇಪಣೆ ಸಲ್ಲಿಸಿ, ಪಲಿತಾಂಶ ಪ್ರಕಟಿಸದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಚುನಾವಣಾಧಿಕಾರಿಗಳು ಗುರುವಾರ ಫಲಿತಾಂಶ ಪ್ರಕಟಿಸಿದ್ದು, ಸಮನಾಗಿದ್ದ ಕ್ಷೇತ್ರದ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಅದೃಷ್ಟ ಲಕ್ಷ್ಮಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರ ಒಲಿದಿದ್ದಾಳೆ.
ಅಂತಿಮವಾಗಿ ಜೆಡಿಎಸ್‍ನ ಪದ್ಮರಾಜು ಕಲ್ಲೇನಹಳ್ಳಿ, ಎ.ಡಿ.ಸಿಂಗ್ರಿಗೌಡ ಆಲದಹಳ್ಳಿ, ಎಚ್.ಎನ್.ಪ್ರೇಮಾ ಹೊಳೆನರಸೀಪುರ, ಎಚ್.ಕೆ.ಲಕ್ಷ್ಮಣ ಹಂಗರಹಳ್ಳಿ, ಪುಟ್ಟಮ್ಮ ಕುಂಕುಮದ ಹೊಸೂರು, ರಜಿನಿ ತೆರಣ್ಯ, ಪಿ.ಬಿ.ಪುರುಷೋತ್ತಮ ಪಡವಲಹಿಪ್ಪೆ, ಶಿವಣ್ಣ ನಾಯ್ಕ ಬಿದರಕ್ಕ ಕ್ಷೇತ್ರದಿಂದ ಜಯಗಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳು ಶಶಿಕುಮಾರ್ ಹೂವಿನಹಳ್ಳಿ, ಜಿ.ಕೆ.ನಂದಕುಮಾರ್ ಗುಂಜೇವು, ಜಿ.ಎಂ.ಲೋಕೇಶ್ ಗಾಳಿಪುರ, ಸಣ್ಣತಮ್ಮಯ್ಯ ದೊಡ್ಡಹಳ್ಳಿ, ನೇತ್ರಪಾಲ ಟಿ.ಮಾಯಗೌಡನಹಳ್ಳಿ, ಎಸ್.ಎಸ್.ಸೋಮೇಗೌಡ ಸೂರನಹಳ್ಳಿ ಕ್ಷೇತ್ರಗಳಿಂದ ವಿಜಯ ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.