ADVERTISEMENT

ಸಂಪುಟ ಪುನರ್‌ರಚನೆ, ಬಡ್ತಿ ಬಗ್ಗೆ ಹೈಕಮಾಂಡ್ ತೀರ್ಮಾನ: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 22:30 IST
Last Updated 29 ಆಗಸ್ಟ್ 2024, 22:30 IST
<div class="paragraphs"><p>ಸಚಿವ ಕೆ.ಎನ್‌. ರಾಜಣ್ಣ</p></div>

ಸಚಿವ ಕೆ.ಎನ್‌. ರಾಜಣ್ಣ

   

ಹಾಸನ: ‘ಸಂಪುಟ ಪುನರ್‌ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಬಡ್ತಿ ಎಲ್ಲವನ್ನೂ ಕಾಂಗ್ರೆಸ್‌ ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

‘ಮುಂಬಡ್ತಿ ಸಿಗುತ್ತದೆ’ ಎಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆಗೆ ಗುರುವಾರ ಇಲ್ಲಿ ಪ್ರತಿಕ್ರಿಯೆ ನೀಡಿದ ಅವರು ‘ರಾಹುಲ್ ಗಾಂಧಿಯವರು ಅವರಿಗೆ ಬಡ್ತಿ ಕೊಡುತ್ತೇವೆ ಎಂದರೆ ನಾವು ತಪ್ಪಿಸಲು ಆಗುತ್ತದೆಯೇ? ಅದರ ಬಗ್ಗೆ ಅವರನ್ನೇ ಕೇಳಿ’ ಎಂದರು.

ADVERTISEMENT

ನಟ ದರ್ಶನ್‌ಗೆ ಜೈಲಿನಲ್ಲಿ ಆತಿಥ್ಯದ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ಸಚಿವರು ‘ದೇಶದಲ್ಲಿ ದರ್ಶನ್‌ ಮಾತ್ರವೇ ಇರೋದಾ? ದಿನವಿಡೀ ಟಿವಿಯಲ್ಲಿ ಅದನ್ನೇ ತೋರಿಸುತ್ತೀರಿ. ಅದಕ್ಕಿಂತ ಒಳ್ಳೆಯದನ್ನು ತೋರಿಸಿ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.