ಆಲೂರು: ಇಲ್ಲಿನ ನಂದಿಪುರ ಎಸ್ಟೇಟ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದ 130 ಯುವಕ-ಯುವತಿಯರಿಗೂ ಠಾಣಾ ಹಂತದಲ್ಲೇ ಜಾಮೀನು ನೀಡಲಾಗಿದೆ.
ಎಸ್ಟೇಟ್ ಮಾಲೀಕ ಗಗನ್, ಕಾರ್ಯಕ್ರಮ ಆಯೋಜಕರು ಎನ್ನಲಾದ ಬೆಂಗಳೂರು ಮುರುಗೇಶ್ ಪಾಳ್ಯ ನಿವಾಸಿ ಸೋನಿ ಮತ್ತು ಬೆಂಗಳೂರು ಬನ್ನೇರುಘಟ್ಟ ನಿವಾಸಿ ಪಂಕಜ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ವೆಂಕಟೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.