ADVERTISEMENT

ಬೇರೆಯವರಾಗಿದ್ರೆ ಕಪಾಳಕ್ಕೆ ಬಾರಿಸ್ತಿದ್ರು: ಅಧಿಕಾರಿಗಳ ವಿರುದ್ಧ ಬೈರೇಗೌಡ ಗರಂ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 16:19 IST
Last Updated 16 ಜನವರಿ 2026, 16:19 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಸಕಲೇಶಪುರ (ಹಾಸನ ಜಿಲ್ಲೆ): ‘ಎಷ್ಟು ಸುಳ್ಳು ಹೇಳ್ತೀರಾ?  ಸ್ವಾಭಿಮಾನ ಅಂದ್ರೆ ಏನು ಅಂತ ಗೊತ್ತಾ?. ಬೇರೆಯವರಾಗಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದರು’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ದೋಣಿಗಾಲ್‌ ಬಳಿ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಅವರು, ‘ಬಾಯಿ ಬಿಟ್ರೆ ಸುಳ್ಳು ಹೇಳ್ತೀರಾ. ಇದೇನಾ ನಿಮ್ಮ ಆರ್ಗನೈಜೇಶನ್‌ ಕಲ್ಚರ್‌?’ ಎಂದು ತರಾಟೆಗೆ ತೆಗೆದುಕೊಂಡರು.

‘ಹಾಸನ ಬೈಪಾಸ್‌ ಕಾಮಗಾರಿಗೆ ಸಮಸ್ಯೆ ಇಲ್ಲ. ಒಂದು ಮರ ತೆರವಿಗೆ ವಿಳಂಬ ಮಾಡುತ್ತಾ, ಕಿ.ಮೀ ಗಟ್ಟಲೆ ರಸ್ತೆ ನಿರ್ಮಿಸದೇ ವಿಳಂಬ ಮಾಡುವುದು ಸರಿಯೇ’ ಎಂದು ಪ್ರಶ್ನಿಸಿದರು.

ADVERTISEMENT

‘9 ವರ್ಷಗಳಾದರೂ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಗಿದಿಲ್ಲ. ನೀವು ಕೇಂದ್ರ ಸರ್ಕಾರಕ್ಕೆ ಇಂತಹ ವರದಿಗಳನ್ನು ನೀಡುತ್ತೀರಾ? ಅದಕ್ಕೇ ಅವರು ಓದಿದ್ದೇ ಓದಿದ್ದು’ ಎಂದು ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸುಳ್ಳು ಮಾಹಿತಿಯನ್ನೂ ಖಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.