ADVERTISEMENT

ಬೇಲೂರು | ಸಜ್ಜಾ ಕುಸಿತ: ಕಟ್ಟಡದ ಮಾಲೀಕನ ಪುತ್ರನ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 0:20 IST
Last Updated 11 ಮಾರ್ಚ್ 2025, 0:20 IST
ಬೇಲೂರಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹಳೇಯ  ಕಟ್ಟಡದ ಕಾಂಕ್ರೀಟ್ ಸಜ್ಜಾ ಕುಸಿತದಿಂದ  ಭಾನುವಾರ ಅವಘಡ ಸಂಭವಿಸಿ, ಸಾವು, ನೋವುಗಳು ಆದ ಕಾರಣ ಅದಕ್ಕೆ ಹೊಂದಿಕೊಂಡತ್ತಿರುವಅಂಗಡಿ ಮಳಿಗೆಗಳನ್ನು ಸಿಜ್ ಮಾಡಿ, ಜನರು ಅಂಗಡಿಯತ್ತ ಹೋಗದಂತೆ ನೋಡಿಕೊಳ್ಳಲಾಯಿತು.
ಬೇಲೂರಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹಳೇಯ  ಕಟ್ಟಡದ ಕಾಂಕ್ರೀಟ್ ಸಜ್ಜಾ ಕುಸಿತದಿಂದ  ಭಾನುವಾರ ಅವಘಡ ಸಂಭವಿಸಿ, ಸಾವು, ನೋವುಗಳು ಆದ ಕಾರಣ ಅದಕ್ಕೆ ಹೊಂದಿಕೊಂಡತ್ತಿರುವಅಂಗಡಿ ಮಳಿಗೆಗಳನ್ನು ಸಿಜ್ ಮಾಡಿ, ಜನರು ಅಂಗಡಿಯತ್ತ ಹೋಗದಂತೆ ನೋಡಿಕೊಳ್ಳಲಾಯಿತು.   

ಬೇಲೂರು: ಇಲ್ಲಿನ ಬಸ್ ನಿಲ್ದಾಣದ ಮುಂಭಾಗ ಕಟ್ಟಡದ ಸಜ್ಜಾ ಕುಸಿತದಿಂದ ಇಬ್ಬರು ಭಾನುವಾರ ಮೃತಪಟ್ಟ ಪ್ರಕರಣ ಸಂಬಂಧ  ಕಟ್ಟಡದ ಮಾಲಿಕ ದಿ.ಸತ್ಯನಾರಾಯಣಗೌಡರ ಪುತ್ರ ಅವಿನಾಶ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇಬ್ಬರಿಗೆ ಕಾಲಿನ ಮೂಳೆ ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿರುವ ಶಿಲ್ಪಾ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಅವಿನಾಶ್ ವಿರುದ್ಧ ಪ್ರಕರಣ ದಾಖಲಾಗಿದೆ.

ವ್ಯಾಪಾರ ನಡೆಸುತ್ತಿದ್ದ ಕಟ್ಟಡದ ಉಳಿದ ಮಳಿಗೆಗಳನ್ನು ಬಂದ್ ಮಾಡಿ ವ್ಯಾಪಾರ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದುಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಎರಡು ಡಿ.ಆರ್.ತುಕ್ಕಡಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಇನ್‌‌‌ಸ್ಪೆಕ್ಟರ್ ರೇವಣ್ಣ ತಿಳಿಸಿದರು.

ADVERTISEMENT

ಶಾಸಕ ಎಚ್.ಕೆ.ಸುರೇಶ್ ಈ ಬಗ್ಗೆ ಸದನದಲ್ಲಿ ಮಾತನಾಡಿ, ‘ಮೃತಪಟ್ಟವರಿಗೆ ತಲಾ ₹50 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಬಂದು ಗಮನ ನೀಡಿಲ್ಲ, ಹಾಸನ ಜಿಲ್ಲೆ ಕರ್ನಾಟಕದಲ್ಲಿ ಇದೆಯೋ, ಕರ್ನಾಟಕ ಹೊರತು ಪಡಿಸಿ ಇದೆಯೋ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.