ADVERTISEMENT

ಹಾಸನ: ಸಕಲೇಶಪುರದಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:35 IST
Last Updated 9 ಅಕ್ಟೋಬರ್ 2025, 6:35 IST
ಸಕಲೇಶಪುರದಲ್ಲಿ ಬುಧವಾರ ಧಾರಾಕಾರವಾಗಿ ಮಳೆ ಸುರಿದು, ನೀರು ರಸ್ತೆಯಲ್ಲಿ ಹೊಳೆಯಂತೆ ಹರಿಯಿತು. ಚಲಿಸುತ್ತಿದ್ದ ಕಾರಿನ ಚಕ್ರದಿಂದ ನೀರು ಕಾರಂಜಿಯಂತೆ ಚಿಮ್ಮಿತು  ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್. ಪರಮೇಶ್‌
ಸಕಲೇಶಪುರದಲ್ಲಿ ಬುಧವಾರ ಧಾರಾಕಾರವಾಗಿ ಮಳೆ ಸುರಿದು, ನೀರು ರಸ್ತೆಯಲ್ಲಿ ಹೊಳೆಯಂತೆ ಹರಿಯಿತು. ಚಲಿಸುತ್ತಿದ್ದ ಕಾರಿನ ಚಕ್ರದಿಂದ ನೀರು ಕಾರಂಜಿಯಂತೆ ಚಿಮ್ಮಿತು  ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್. ಪರಮೇಶ್‌   

ಸಕಲೇಶಪುರ: ಪಟ್ಟಣವೂ ಸೇರಿ ತಾಲ್ಲೂಕಿನಾದ್ಯಂತ ಬುಧವಾರ ಮಧ್ಯಾಹ್ನದಿಂದ ಸಂಜೆವರೆಗೆ ಮಳೆ ಧಾರಕಾರ ಸುರಿಯಿತು.

ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಇರುವುದರಿಂದ, ಮಧ್ಯಾಹ್ನ 3 ರಿಂದ 4 ಗಂಟೆಯ ವರೆಗೂ ಮಳೆ ನೀರು ರಸ್ತೆಗಳ ಮೇಲೆ ಹೊಳೆಯಂತೆ ಉಕ್ಕಿ ಹರಿದು, ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ರಸ್ತೆ ಬದಿಯಲ್ಲಿ ನಡೆದು ಹೋಗುವ ಪಾದಚಾರಿಗಳಿಗೆ ವಾಹನಗಳ ಚಕ್ರದಿಂದ ನೀರು ಚಿಮ್ಮಿ ಕೆಂಪು ನೀರಿನ ಸ್ನಾನವೇ ಆಯಿತು. ಗ್ರಾಮೀಣ ಪ್ರದೇಶಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿಯೇ ನೆನೆದುಕೊಂಡೇ ಬಸ್‌ ನಿಲ್ದಾಣದತ್ತ ಓಡುತ್ತಿದ್ದರು. ಬೆಳಿಗ್ಗೆಯಿಂದ ಬಿಸಿಲು ಇದ್ದು ಇದ್ದಕ್ಕಿದ್ದಂತೆ ಮಳೆ ಸುರಿದಿದ್ದರಿಂದ ರಸ್ತೆ ಬದಿಯ ವ್ಯಾಪಾರಿಗಳು ಪರದಾಡಿದರು.

5 ತಿಂಗಳಿಂದ ನಿರಂತರ ಮಳೆ ಸುರಿದು, ಕಳೆದ ಒಂದು ವಾರದಿಂದ ಬಿಡುವು ನೀಡಿದ್ದರಿಂದ ರೈತರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಪುನಃ ಮಳೆಯಾಗುತ್ತಿರುವುದರಿಂದ ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವಂತಾಗಿದೆ ಎಂದು ಬೆಳೆಗಾರರೊಬ್ಬರು ಆತಂಕ ವ್ಯಕ್ತಪಡಿಸಿದರು.

ADVERTISEMENT
ಸಕಲೇಶಪುರ ಪುರಸಭಾ ವ್ಯಾಪ್ತಿಯ ನೇತಾಜಿ ಸುಭಾಷ್ ಚಂದ್ರಬೋಸ್ ರಸ್ತೆಯಲ್ಲಿ ಬುಧವಾರ ಮಳೆ ನೀರು ಹೊಳೆಯಂತೆ ಹರಿಯಿತು ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್. ಪರಮೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.