ADVERTISEMENT

ಸಕಲೇಶಪುರ | ಪೌರ ಕಾರ್ಮಿಕರ ಸೇವೆ ಅಮೂಲ್ಯ : ಮುರುಳಿ ಮೋಹನ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:09 IST
Last Updated 6 ಫೆಬ್ರುವರಿ 2026, 6:09 IST
ಸಕಲೇಶಪುರದಲ್ಲಿ ಮುರುಳಿ ಮೋಹನ್ ಯುವ ಬ್ರಿಗೇಡ್  ಈಚೆಗೆ ಆಯೋಜಿಸಿದ್ದ ಸಕಲೇಶಪುರ ಹಬ್ಬದಲ್ಲಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು
ಸಕಲೇಶಪುರದಲ್ಲಿ ಮುರುಳಿ ಮೋಹನ್ ಯುವ ಬ್ರಿಗೇಡ್  ಈಚೆಗೆ ಆಯೋಜಿಸಿದ್ದ ಸಕಲೇಶಪುರ ಹಬ್ಬದಲ್ಲಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು   

ಸಕಲೇಶಪುರ:  ‘ಜನರು ಬೆಳಿಗ್ಗೆ ಎಚ್ಚರಗೊಳ್ಳುವ ಮೊದಲೇ ಇಡೀ ಊರು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಸೇವೆ ಅಮೂಲ್ಯವಾಗಿದೆ’ ಎಂದು ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮುರುಳಿ ಮೋಹನ್ ಹೇಳಿದರು.

 ಮುರುಳಿ ಮೋಹನ್ ಕಾಂಗ್ರೆಸ್‌ ಯುವ ಬ್ರಿಗೇಡ್  ಈಚೆಗೆ ಆಯೋಜಿಸಿದ್ದ ಸಕಲೇಶಪುರ ಹಬ್ಬದಲ್ಲಿ ಪೌರ ಕಾರ್ಮಿಕರು ಹಾಗೂ ವಿವಿಧ ಸಮುದಾಯಗಳ ಸಾಧರಕನ್ನು ಸನ್ಮಾನಿಸಿ ಅವರು ಮಾತನಾಡಿದರು. ಸಕಲೇಶ್ವರಸ್ವಾಮಿ ರಥೋತ್ಸವದಂದೇ ಹಬ್ಬವನ್ನು ಆಚರಿಸಲು  ಬ್ರಿಗೇಡ್ ಕಾರ್ಯಕರ್ತರು ನಿರ್ಧರಿಸಿದ್ದು, ಪ್ರತಿವರ್ಷ ಇದೇ ರೀತಿ ನಡೆಸಲಾಗುವುದು ಎಂದರು.

‘ರಥೋತ್ಸವ ಹಾಗೂ ದೇವಸ್ಥಾನ ಸಮಿತಿ ಸದಸ್ಯರನ್ನೂ ಹಬ್ಬದಲ್ಲಿ ಗೌರವಿಸಲಾಗಿದೆ.  ಹಿರಿಯ ಮಾರ್ಗದರ್ಶನದಲ್ಲಿ ಯುವಕರ ತಂಡ ರಥವನ್ನು ಅತ್ಯಂತ ಆಕರ್ಷಕವಾಗಿ ಅಲಂಕರಿಸಿತ್ತು. ಹೇಮಾವತಿ ನದಿಗೆ ಆರತಿ ಪೂಜೆಯನ್ನು ದೇವಸ್ಥಾನ ಸಮಿತಿಯವರು ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಮಾಜಿ ಶಾಸಕ ಬಿ.ಆರ್. ಗುರುದೇವ್‌, ತಹಶೀಲ್ದಾರ್ ಕೆ.ಎಸ್‌. ಸುಪ್ರೀತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್, ಬ್ರಿಗೇಡ್‌ ಅಧ್ಯಕ್ಷ ಅರ್ಜುನ ಶುಕ್ರವಾರಸಂತೆ, ಸಕಲೇಶಪುರ ಪ್ರಾಧಿಕಾರ ಅಧ್ಯಕ್ಷ ಸೈಯದ್‌ ಮುಫೀಜ್‌, ಬ್ಯಾಕರವಳ್ಳಿ ಜಯಣ್ಣ, ಎಚ್‌.ಎಚ್‌. ಉದಯ್‌, ಬ್ಯಾಕರವಳ್ಳಿ ವಿಜಯ್‌ಕುಮಾರ್, ಮಾಸವಳ್ಳಿ ಸಂಗಪ್ಪ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.