ADVERTISEMENT

ಹಂಚೂರು ಗ್ರಾಮ ಪಂಚಾಯಿತಿ: ಎಂಟು ಸದಸ್ಯರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 8:52 IST
Last Updated 31 ಡಿಸೆಂಬರ್ 2021, 8:52 IST
ಆಲೂರು ಮಿನಿ ವಿಧಾನಸೌಧದಲ್ಲಿ ಮುಂದೆ ವಿಜಯಿ ಅಭ್ಯರ್ಥಿಗಳ ಬೆಂಬಗಲಿಗರು ಮೆರವಣಿಗೆ ನಡೆಸಿ ಸಂಭ್ರಮಿಸಿದರು
ಆಲೂರು ಮಿನಿ ವಿಧಾನಸೌಧದಲ್ಲಿ ಮುಂದೆ ವಿಜಯಿ ಅಭ್ಯರ್ಥಿಗಳ ಬೆಂಬಗಲಿಗರು ಮೆರವಣಿಗೆ ನಡೆಸಿ ಸಂಭ್ರಮಿಸಿದರು   

ಆಲೂರು: ಹಂಚೂರು ಗ್ರಾಮ ಪಂಚಾಯಿತಿ ಎಂಟು ಸ್ಥಾನಗಳಿಗೆ ಮತ್ತು ಕಣತೂರು ಗ್ರಾಮ ಪಂಚಾಯಿತಿ ನಾಕಲಗೂಡು ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಫಲಿತಾಂಶ ಗುರುವಾರ ಘೋಷಣೆಯಾಗುತ್ತಿದ್ದಂತೆ ವಿಜೇತರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

ಹಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಹೊಸಳ್ಳಿ ಕ್ಷೇತ್ರಕ್ಕೆ: ಬಿ.ಪಿ. ಷಣ್ಮುಖ (ಪಡೆದ ಮತ 164), ಕಡಬಗಾಲ: ಪುಷ್ಪಾಪ ಹೊಸಪಟ್ಟಣ (357),ಕಗ್ಗರವಳ್ಳಿ: ಎಂ. ಡಿ. ಶರಣ್ (174), ಹಂಚೂರು: ಎಚ್. ಎಂ. ಚಂದ್ರಶೇಖರ (255), ಮಣಿಗನಹಳ್ಳಿ: ಹೇಮಲತಾ (276), ಭಕ್ತರವಳ್ಳಿ: ಬಿ. ಜೆ. ಮಂಜೇಗೌಡ (160), ಗಂಗರ ಕ್ಷೇತ್ರದಲ್ಲಿ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರಕ್ಕೆ ಪಾರ್ವತಮ್ಮ (334) ಮತ್ತು ಪ. ಜಾತಿ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಕೇಶವಮೂರ್ತಿ (178) ಆಯ್ಕೆಯಾದರು.

ಕಣತೂರು ಗ್ರಾಮ ಪಂಚಾಯಿತಿ ನಾಕಲಗೂಡು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ರಾಧಾ (317), ವಿಜಯಶಾಲಿಯಾದರು.

ADVERTISEMENT

ಪಟ್ಟಣದ ಮಿನಿವಿಧಾನಸೌಧದಲ್ಲಿ ಮತ ಎಣಿಕೆ ಮಧ್ಯಾಹ್ನ 3 ಗಂಟೆವರೆಗೆ ನಡೆಯಿತು. ತಹಶೀಲ್ದಾರ್‌ ಶಿರೀಜ್‌ ತಾಜ್ ಅವರುಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ಆಗ ವಿಜಯಿ ಅಭ್ಯರ್ಥಿಗಳನ್ನು ಎತ್ತಿ ಹಿಡಿದು ಅಭಿಮಾನಿಗಳು ಜಯಘೋಷ ಕೂಗಿದರು. ಕೆಲವರು ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಇನ್‌ಸ್ಪೆಕ್ಟರ್ ಹೇಮಂತಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.