ADVERTISEMENT

ಬಾಗೂರು: ಟಿಎಪಿಎಂಎಸ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಂದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 8:56 IST
Last Updated 18 ಅಕ್ಟೋಬರ್ 2025, 8:56 IST
ಚನ್ನರಾಯಪಟ್ಟಣ ತಾಲ್ಲೂಕು ಟಿಎಪಿಎಂಎಸ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಾಗೂರು ಹೋಬಳಿ ವಿವಿಧಡೆ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು 
ಚನ್ನರಾಯಪಟ್ಟಣ ತಾಲ್ಲೂಕು ಟಿಎಪಿಎಂಎಸ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಾಗೂರು ಹೋಬಳಿ ವಿವಿಧಡೆ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು    

ಬಾಗೂರು: ಇದೇ ತಿಂಗಳ 19ರಂದು ನಡೆಯುವ ಚನ್ನರಾಯಪಟ್ಟಣ ತಾಲ್ಲೂಕು ಟಿಎಪಿಎಂಎಸ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೋಬಳಿ ವಿವಿಧಡೆ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು.

ಈಗಾಗಲೇ 14 ಸ್ಥಾನಗಳ ಪೈಕಿ 07 ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡಿದೆ. ಇನ್ನುಳಿದ 07 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತು ಬಿಜೆಪಿಯ ಒಬ್ಬ ಅಭ್ಯರ್ಥಿ ಹಾಗೂ ಇತರರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಟಿಎಪಿಎಂಎಸ್ ಮಾಜಿ ಅಧ್ಯಕ್ಷ, ಹಾಲಿ ಅಭ್ಯರ್ಥಿ ಕುಂಬಾರಹಳ್ಳಿ ರಮೇಶ್ ಮಾತನಾಡಿ, ‘ಮುಂಬರುವ ದಿನಗಳಲ್ಲೂ ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲು ಪುನಃ ಜೆಡಿಎಸ್ ಪಕ್ಷದ ನಿರ್ದೇಶಕರು ಆಡಳಿತ ಮಂಡಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಂಡರೆ ಸಾಧ್ಯವಾಗುತ್ತದೆ’ ಎಂದರು.

ADVERTISEMENT

ಜೆಡಿಎಸ್ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದಿಂದ ಮರಗೂರು ಅನಿಲ್ ಕುಮಾರ್, ನಂಜುಂಡೇಗೌಡ, ಬಿಸಿಎಂಬಿ ಕ್ಷೇತ್ರದಿಂದ ಕುಂಬಾರ ಹಳ್ಳಿ ರಮೇಶ್, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಮಮತಾ ಬೋರ್ವೆಲ್ ಜಯಣ್ಣ, ಎಂ.ತಾರಾಮಣಿ, ಸಿ.ಎನ್. ಆನಂದ್, ಬಿಸಿಎಂಎ ಕ್ಷೇತ್ರದಿಂದ ಮೀಸೆ ಜಗದೀಶ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕುಂಬಾರಹಳ್ಳಿ ಕೆ.ಆರ್.ರವಿಕುಮಾರ್, ಉಳಿದಿರುವ 07 ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದಾರೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್ ಶಿವಣ್ಣ, ಬಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣೇಗೌಡ, ಟಿಎಪಿಎಂಎಸ್ ನೂತನ ನಿರ್ದೇಶಕರಾದ ಪರಮ ಕೃಷ್ಣೆಗೌಡ, ತೋಟಿ ನಾಗರಾಜ್, ಶಿವಶಂಕರ ಕುಂಟೆ, ರಾಮಚಂದ್ರು, ಬೋರ್ವೆಲ್ ಜಯಣ್ಣ , ಮುಖಂಡರಾದ ಮನು, ಚಂದ್ರೇಗೌಡ, ಕಾಂತರಾಜ್, ಗೋವಿನಕೆರೆ ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.