ಶ್ರವಣಬೆಳಗೊಳ: ಹೋಬಳಿಯ ಸುಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕರಿಯಪ್ಪ ಹಾಗೂ ಉಪಾಧ್ಯಕ್ಷರಾಗಿ ಶಿಲ್ಪಾ ಮಂಗಳವಾರ ಆಯ್ಕೆಯಾಗಿದ್ದಾರೆ.
ಪಂಚಾಯಿತಿಯಲ್ಲಿ 14 ಸದಸ್ಯ ಬಲವಿದ್ದು ಜೆಡಿಎಸ್ ಬೆಂಬಲಿತ ಸದಸ್ಯ ಕರಿಯಪ್ಪ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ಜನಾರ್ದನ್ ನಾಮಪತ್ರ ಸಲ್ಲಿಸಿದ್ದರು. ಇಬ್ಬರೂ ತಲಾ 7 ಮತಗಳು ಪಡೆದು ಸಮಬಲ ಸಾಧಿಸಿದರು. ನಂತರ ಲಾಟರಿ ಪ್ರಕ್ರಿಯೆಯಲ್ಲಿ ಕರಿಯಪ್ಪಗೆ ಅದೃಷ್ಟ ಒಲಿಯಿತು. ಶಿಲ್ಪಾ 8 ಮತ ಪಡೆದು ಉಪಾಧ್ಯಕ್ಷರಾದರು.
ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಪಿಡಿಒ ಗಿರೀಶ್ ಕುಮಾರ್ ಚುನಾವಣಾಧಿಕಾರಿಯಾಗಿದ್ದರು.
ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ವಿಜೇತರಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದನೆ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಸದಸ್ಯರಾದ ಪ್ರಕಾಶ್, ಅನಿತಾ, ಪವಿತ್ರಾ, ರೇಣುಕಾಬಾಯಿ, ಹಾಲಮ್ಮ, ಮಂಜುಶೆಟ್ಟಿ, ಮುಖಂಡರಾದ ಪರಮ ದೇವರಾಜೇಗೌಡ, ಎಚ್.ಎನ್.ಲೋಕೇಶ್, ಎಚ್.ಕೆ.ಹರೀಶ್, ಜಯರಾಮ್, ಕೃಷ್ಣಮೂರ್ತಿ, ಹೊಸಮನೆ ಹರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.