ಹೊಳೆನರಸೀಪುರ: ಪಟ್ಟಣದ ಆರ್ಯವೈಶ್ಯ ಯುವ ಬ್ರಿಗೇಡ್‍ನ ಯುವಕರು ಪೇಟೆ ಮುಖ್ಯರಸ್ತೆಯ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಬುಧವಾರ ಪ್ರತಿಷ್ಠಾಪಿಸಿರುವ ತಿರುಪತಿ ಬಲಾಜಿ ಅವತಾರದ ಹರಳಿನ ಗಣೇಶ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ತಿರುಪತಿ ಬಾಲಾಜಿ ರೀತಿಯಲ್ಲಿ ನಿಂತಿರುವ, ಹಣೆಯ ಮೇಲೆ ಮೂರು ನಾಮ, ದೇವರ ಮೇಲೆ ಹಾಕಿರುವ ತೋಮಾಲೆ ತಿರುಪತಿಯ ವೆಂಕಟೇಶ್ವರನನ್ನೇ ನೋಡಿದ ರೀತಿ ಆಗುತ್ತಿದೆ ಎಂದು ದರ್ಶನ ಪಡೆದ ಜನರು ಬಣ್ಣಿಸುತ್ತಿದ್ದಾರೆ.
ಯುವ ಬ್ರಿಗೇಡ್‍ನ ಶಬರೀಶ್ ಮಾತನಾಡಿ 'ಸಂಸದ ಶ್ರೇಯಶ್ ಪಟೇಲ್ ಹಾಗೂ ನಮ್ಮವರ ಸಹಕಾರದಿಂದ ನಾವು ಬೆಂಗಳೂರಿನಲ್ಲಿ 95 ಸಾವಿರ ವೆಚ್ಚದಲ್ಲಿ ಮಣ್ಣಿನ ಗಣೇಶನನ್ನು ಮಾಡಿಸಿ ಹರಳನ್ನು ಹಾಕಿಸಿ ತಂದಿದ್ದೇವೆ. ಅತ್ಯಂತ ಆಕರ್ಷಕವಾಗಿದೆ. ಕಳೆದ 11 ವರ್ಷಗಳಿಂದ ನಮ್ಮ ಯುವ ಬ್ರಿಗೇಡ್ ವತಿಯಿಂದ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದೇವೆ. ಕಳೆದ ಸಾಲಿನಲ್ಲಿ 108 ಗಣೇಶನನ್ನು ಪ್ರತಿಷ್ಠಾಪಿಸಿದ್ದೆವು. ಈ ಬಾರಿ ವಿಶೇಷವಾಗಿರುವ ಗಣೇಶನನ್ನು ಪ್ರತಿಷ್ಠಾಪಿಸಿದ್ದೇವೆ’ ಎಂದರು.
‘ಗಣೇಶನಿಗೆ ಪ್ರತಿ ದಿನ ಮಧ್ಯಾಹ್ನ 12 ಗಂಟೆಗೆ ಹಾಗೂ ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ. ಸೆಪ್ಟೆಂಬರ್ 5ಕ್ಕೆ ಮಹಾಗಣಪತಿ ಹೋಮ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದೇವೆ. ಸೆ.6 ರ ಶನಿವಾರ ಸಂಜೆ ಮೆರವಣಿಗೆ ನಡೆಸಿ ಗಣೇಶನನ್ನು ವಿಸರ್ಜಿಸುತ್ತೇವೆ’ ಎಂದು ತಿಳಿಸಿದರು.
ಯುವ ಬ್ರಿಗೇಡ್‍ನ ಶಬರೀಶ್, ಶ್ರೇಯಶ್, ಧೀರಜ್, ಅಮರ್‍ನಾಗ್, ರಜತ್, ಅಭಿತ್, ಋತ್ವಿಕ್, ವಿಜಯ್, ಚೇತನ್, ರಾಹುಲ್ ನೇತೃತ್ವ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.