ADVERTISEMENT

ಹಾಸನ: ದರ್ಶನ ಕರುಣಿಸಿದ ಹಾಸನಾಂಬೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 8:01 IST
Last Updated 5 ನವೆಂಬರ್ 2020, 8:01 IST
ತಳವಾರ ವಂಶದ ನರಸಿಂಹ ರಾಜ ಅರಸ್‌ ಅವರು ಬಾಳೆ ಕಂದು ಕಡಿಯುವ ಮೂಲಕ ಹಾಸನಾಂಬೆ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು.
ತಳವಾರ ವಂಶದ ನರಸಿಂಹ ರಾಜ ಅರಸ್‌ ಅವರು ಬಾಳೆ ಕಂದು ಕಡಿಯುವ ಮೂಲಕ ಹಾಸನಾಂಬೆ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು.   
""

ಹಾಸನ: ಅಧಿದೇವತೆ ಹಾಸನಾಂಬೆ ಗರ್ಭಗುಡಿ ಬಾಗಿಲು ಮಧ್ಯಾಹ್ನ 12.17ಕ್ಕೆ ತೆರೆಯಲಾಯಿತು. ಅರಸು ವಂಶಸ್ಥರಾದ ನಂಜರಾಜ ಅವರು ಬಾಳೆ ಕಡಿದ ನಂತರ ತೆರೆದ ಬಾಗಿಲು ತರೆಯಲಾಯಿತು.

ಕಡಿದ ಬಾಳೆ ಕಂಬದ ಪಳೆಯುಳಿಕೆ ಪಡೆಯಲು‌ ಜನರು ಮುಗಿಬಿದ್ದರು. ಎಲ್ಲೆಡೆ ಮೊಳಗಿದ ಜಯಘೋಷ, ಗಂಟೆನಾದ ಮೊಳಗಿತು. ಅಂತರ ಮರೆತು ಗುಂಪುಗಟ್ಟಿದ ಜನರ ಗುಂಪು ಕಂಡುಬಂತು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ‘ಹಾಸನಾಂಬೆ, ಸಿದ್ದೇಶ್ವರ ಸ್ವಾಮಿ‌ ಉತ್ಸವ ಆರಂಭವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶಾಸ್ತ್ರೋಕ್ತವಾಗಿ ಉತ್ಸವ ನಡೆಯಲಿದೆ. ದೇವಾಲಯ ಬಾಗಿಲು ತೆರೆದಾಗ ದೀಪ ಉರಿಯುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ದರ್ಶನ ಇಲ್ಲ. ಯಾರೂ ದೇವಾಲಯ ಬಳಿ ಬರುವುದು ಬೇಡ. ತಾಯಿ ಆಶೀರ್ವಾದದಿಂದ ಹಾಸನ, ನಾಡು, ದೇಶದಲ್ಲಿ ಕೊರೊನಾ ತೊಲಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ’ ಎಂದು ಹೇಳಿದರು.

ADVERTISEMENT

ಕಾನೂನು ಸಚಿವ ಮಾಧುಸ್ವಾಮಿ, ಶಾಸಕ‌ ಪ್ರೀತಂ ಗೌಡ ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದರು.

ಹಾಸನಾಂಬೆ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿರುವ ಭಕ್ತಾಧಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.