ADVERTISEMENT

ವಿಶ್ವಕರ್ಮ ಮಹಾಸಂಸ್ಥಾನ ಮಠ: ಫೆ. 25ಕ್ಕೆ ಪಟ್ಟಾಭಿಷೇಕ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:52 IST
Last Updated 18 ಫೆಬ್ರುವರಿ 2026, 6:52 IST
<div class="paragraphs"><p>ಅರಕಲಗೂಡಿನಲ್ಲಿ ಸೋಮವಾರ ನಡೆದ ತಾಲ್ಲೂಕು ವಿಶ್ವ ಕರ್ಮ ಸಮಾಜದ ಪೂರ್ವ ಭಾವಿ ಸಭೆಯಲ್ಲಿ ವಿಶ್ವಕರ್ಮ ಮಹಾಸಂಸ್ಥಾನ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿದರು. ಸಂತೋಷ್, ಎಚ್. ಬಿ. ಕೃಷ್ಣ, ಪ್ರವೀಣ್ ಕುಮಾರ್ ಭಾಗವಹಿಸಿದ್ದರು.</p></div>

ಅರಕಲಗೂಡಿನಲ್ಲಿ ಸೋಮವಾರ ನಡೆದ ತಾಲ್ಲೂಕು ವಿಶ್ವ ಕರ್ಮ ಸಮಾಜದ ಪೂರ್ವ ಭಾವಿ ಸಭೆಯಲ್ಲಿ ವಿಶ್ವಕರ್ಮ ಮಹಾಸಂಸ್ಥಾನ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿದರು. ಸಂತೋಷ್, ಎಚ್. ಬಿ. ಕೃಷ್ಣ, ಪ್ರವೀಣ್ ಕುಮಾರ್ ಭಾಗವಹಿಸಿದ್ದರು.

   

ಅರಕಲಗೂಡು: ತಾಲ್ಲೂಕಿನ ಅರೆಮಾದನಹಳ್ಳಿ ವಿಶ್ವಕರ್ಮ ಮಹಾಸಂಸ್ಥಾನ ಮಠದಲ್ಲಿ ಫೆ. 25 ಮತ್ತು 26ರಂದು 19ನೇ ಪೀಠಾಧಿಪತಿ ಶಿಷ್ಯ ಸ್ವೀಕಾರ ಹಾಗೂ ಪಟ್ಟಾಭಿಷೇಕ ಮಹೋತ್ಸವ ವೈಭವದಿಂದ ನಡೆಯಲಿದೆ ಎಂದು ಮಠಾಧೀಶ ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕೋಟೆ ಉಮಾಮಹೇಶ್ವರಿ ದೇವಾಲಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಠದ 19ನೇ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫೆ 25 ಮತ್ತು 26ರಂದು  ಸನ್ಯಾಸ ದೀಕ್ಷೆ, ಶಿಷ್ಯ ಸ್ವೀಕಾರ ಮತ್ತು ಪಟ್ಟಾಭಿಷೇಕ ನೆರವೇರಿಸಲಾಗುತ್ತದೆ.  ಮಠವು ಸಹಸ್ರಮಾನದ ಸಂಭ್ರಮದ ಹೊಸ್ತಿಲಲ್ಲಿದ್ದು,  43 ವರ್ಷಗಳಿಂದ  ತಾವು ಸಮಾಜದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ನಿರಂತರ ಸೇವೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಸಮಾಜದ ಸಂಘಟನೆ ಮತ್ತು ಬಲವರ್ಧನೆಗಾಗಿ ಹಾಸನ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ವಿಶ್ವಕರ್ಮ ಮಹಾ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಮಠಕ್ಕೆ  ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಶಿಷ್ಯರಿದ್ದು,  ಎಲ್ಲರನ್ನೂ ಒಗ್ಗೂಡಿಸಿ ಶೈಕ್ಷಣಿಕ ಮತ್ತು ಸಾಮಾಜಿಕ ಸೌಲಭ್ಯಗಳನ್ನು ಒದಗಿಸುವುದು  ಉದ್ದೇಶವಾಗಿದೆ ಎಂಧು ತಿಳಿಸಿದರು.

 ತಾಲ್ಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಯೋಗೇಶ್, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಕುಮಾರ್, ಉಮಾಮಹೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಬಿ. ಕೃಷ್ಣ, ಉಪಾಧ್ಯಕ್ಷ ಮಂಜಾಚಾರ್, ಅರ್ಚಕ ವಿಶ್ವೇಶ್ವರ ಶರ್ಮ, ಹಾಸನದ ಕಾಳಿಕಾಂಭ ಸಹಕಾರ ಸಂಘದ ನಿರ್ದೇಶಕ ಶಶಿಧರ್ ಆಚಾರ್, ರಾಮನಾಥಪುರ ಸಂಘದ ಗೋವಿಂದರಾಜು, ಎಂ.ವೈ. ದೇವರಾಜು, ಸುರೇಶ್, ಸಣ್ಣಸ್ವಾಮಿ, ಮಹೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.