ADVERTISEMENT

ಹಾಸನ: ಬಿಜೆಪಿಗೆ ಮರಳಿದ ಯೋಗಾ ರಮೇಶ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 15:13 IST
Last Updated 4 ಡಿಸೆಂಬರ್ 2021, 15:13 IST
ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್ ಅವರು ಬೆಂಗಳೂರಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಸಚಿವ ಕೆ.ಗೋಪಾಲಯ್ಯ, ನಳೀನ್‌ ಕುಮಾರ್ ಕಟೀಲ್, ನಾಗೇಂದ್ರ ಇದ್ದಾರೆ.
ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್ ಅವರು ಬೆಂಗಳೂರಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಸಚಿವ ಕೆ.ಗೋಪಾಲಯ್ಯ, ನಳೀನ್‌ ಕುಮಾರ್ ಕಟೀಲ್, ನಾಗೇಂದ್ರ ಇದ್ದಾರೆ.   

ಹಾಸನ: ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್ ಮರಳಿ ಬಿಜೆಪಿ ಸೇರಿದರು.

ಬೆಂಗಳೂರಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವಕೆ.ಗೋಪಾಲಯ್ಯ ಅವರು ಪಕ್ಷದ ಬಾವುಟ ನೀಡಿ ಬರ ಮಾಡಿಕೊಂಡರು.

ಈ ವೇಳೆ ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಮಾಜಿಅಧ್ಯಕ್ಷ ರೇಣುಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮೈಸೂರು ಬಿಜೆಪಿಶಾಸಕ ಎಲ್.ನಾಗೇಂದ್ರ ಇದ್ದರು.

ADVERTISEMENT

ಯೋಗಾ ರಮೇಶ್ ಪ್ರತಿನಿಧಿಸುವ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಅವರ ನೂರಾರು ಬೆಂಬಲಿಗರೂ ಆಗಮಿಸಿದ್ದರು. ಈ ಹಿಂದೆ ಬಿಜೆಪಿಯಲ್ಲಿಯೇ ಇದ್ದ ಇವರು, ಜಿಲ್ಲಾಧ್ಯಕ್ಷರೂ ಆಗಿ ಪಕ್ಷಸಂಘಟನೆಗೆ ತಮ್ಮದೇ ಕೊಡುಗೆ ನೀಡಿದ್ದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸಿಪರಾಭವಗೊಂಡಿದ್ದರು. ಆದರೆ, ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎ.ಮಂಜುಅವರು ಬಿಜೆಪಿ ಸೇರಿದ ನಂತರ ಪಕ್ಷ ತ್ಯಜಿಸಿದ್ದರು. ನಂತರ ಕಾಂಗ್ರೆಸ್ ಸೇರಿದ್ದರೂ, ಎಲ್ಲೂ ಕೂಡಸಕ್ರಿಯವಾಗಿ ಗುರುತಿಸಿಕೊಂಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಆ ಪಕ್ಷದಿಂದಲೂ ದೂರ ಉಳಿದುಪೊಟ್ಯಾಟೋ ಕ್ಲಬ್‍ಗೆ ಮತ್ತಷ್ಟು ಪುನಶ್ಚೇತನ ನೀಡಿ ರೈತರ ಹಲವು ಸಮಸ್ಯೆಗಳ ಪರ ದನಿಎತ್ತುತ್ತಿದ್ದರು.

ಬಳಿಕ ಮಾತನಾಡಿದ ರಮೇಶ್, ‘ಜನಸೇವೆ ಮಾಡಬೇಕು ಎಂಬ ಉದ್ದೇಶದಿಂದ ಸ್ವತಂತ್ರವಾಗಿ ರಾಜಕೀಯ ಪ್ರವೇಶ ಮಾಡಿದ ನಾನು ನಂತರದಲ್ಲಿ ಬಿಜೆಪಿ ಸೇರಿದ್ದೆ. ಪಕ್ಷ ನನ್ನನ್ನು ಹಾಸನಜಿಲ್ಲಾಧ್ಯಕ್ಷನನ್ನಾಗಿ ಮಾಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೂನೀಡಿತ್ತು. ನಂತರದಲ್ಲಿ ಆದ ಬೆಳವಣಿಗೆಯಿಂದ ಪಕ್ಷ ಬಿಡುವ ದುಡುಕಿನ ನಿರ್ಧಾರ ಕೈಗೊಂಡಿದ್ದೆ.ತಪ್ಪು ಮರುಕಳಿಸದಂತೆ ಪಕ್ಷಕ್ಕಾಗಿ ಕೆಲಸ ಮಾಡುವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.