ADVERTISEMENT

‘ವಿಜ್ಞಾನದ ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 14:46 IST
Last Updated 18 ಡಿಸೆಂಬರ್ 2018, 14:46 IST
ಹಾವೇರಿಯ ಟಿಎಂಎಇಎಸ್‌ ಬಿ.ಇಡಿ ಕಾಲೇಜಿನಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಇನ್‌ಸ್ಪೈರ್‌ ಅವಾರ್ಡ್ ಸ್ಪರ್ಧೆಗೆ ಬಂದ ವಿಜ್ಞಾನ ಮಾದರಿಗಳನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಉಪಾಧ್ಯಕ್ಷರಾದ ದೀಪಾ ಅತ್ತಿಗೇರಿ, ಉಪನಿರ್ದೇಶಕ ಅಂದಾನಪ್ಪ ವಡಗೇರಿ ವೀಕ್ಷಿಸಿದರು
ಹಾವೇರಿಯ ಟಿಎಂಎಇಎಸ್‌ ಬಿ.ಇಡಿ ಕಾಲೇಜಿನಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಇನ್‌ಸ್ಪೈರ್‌ ಅವಾರ್ಡ್ ಸ್ಪರ್ಧೆಗೆ ಬಂದ ವಿಜ್ಞಾನ ಮಾದರಿಗಳನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಉಪಾಧ್ಯಕ್ಷರಾದ ದೀಪಾ ಅತ್ತಿಗೇರಿ, ಉಪನಿರ್ದೇಶಕ ಅಂದಾನಪ್ಪ ವಡಗೇರಿ ವೀಕ್ಷಿಸಿದರು   

ಹಾವೇರಿ: ಮಕ್ಕಳಲ್ಲಿ ಹೊಸ ಹೊಸ ವಿಚಾರಗಳ ಮೂಲಕ ವಿಜ್ಞಾನದ ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದ್ದು, ವೈಜ್ಞಾನಿಕವಾಗಿ ಅವಶ್ಯವಿರುವ ಸಮಸ್ಯೆಗಳ ನಿವಾರಣೆಗೆ ಯುವ ವಿಜ್ಞಾನಿಗಳು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಹೇಳಿದರು.

ನಗರದ ಟಿಎಂಎಇಎಸ್‌ ಬಿ.ಇಡಿ ಕಾಲೇಜಿನಲ್ಲಿಮಂಗಳವಾರ ನಡೆದ ಜಿಲ್ಲಾ ಮಟ್ಟದ ಇನ್ಸ್‌ಪೈರ್‌ ಅವಾರ್ಡ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ವಿಜ್ಞಾನಿಗಳಂತೆ ಇಂದಿನ ಮಕ್ಕಳು ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆಮುಂದಾಗುತ್ತಿದ್ದಾರೆ. ಮಕ್ಕಳ ಆವಿಷ್ಕಾರದಿಂದಲೇಇಂದು ದೇಶದಲ್ಲಿ ಬದಲಾವಣೆ ಪ್ರಯೋಗಗಳು ನಡೆಯುತ್ತಿದ್ದು,ಅವುಗಳ ನಿರ್ಬಂಧಕ್ಕೆಒಳಪಡಿಸಬಾರದು. ಸರ್ಕಾರ ನೀಡುವ ಪ್ರೋತ್ಸಾಹ ಹಣವನ್ನು ಹೆಚ್ಚಿಸಬೇಕು.ಅಲ್ಲದೇ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದರಾಜ ಕಲಕೋಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಪ್ರತಿಭೆಗಳನ್ನು ಅನಾವರಣ ಮಾಡಲು ಅವಕಾಶಗಳು ಕಡಿಮೆ ಇದ್ದವು. ಆದರೆ ಇಂದಿನ ದಿನದಲ್ಲಿ ಅವಕಾಶಗಳುಹೆಚ್ಚಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಡಯಟ್ ಉಪನ್ಯಾಸಕ ರಾಯಣ್ಣ ಚಿನ್ನಿಕಟ್ಟೆ ಮಾತನಾಡಿ, ರಾಜ್ಯದಲ್ಲೇ ಇನ್ಸ್‌ಪೈರ್ ಅವಾರ್ಡ್ ಪಡೆಯುವಲ್ಲಿ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. 665 ವಿದ್ಯಾರ್ಥಿಗಳು ಇನ್ಸ್‌ಪೈರ್ ಅವಾರ್ಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ₹65 ಲಕ್ಷ ಅನುದಾನವನ್ನು ಜಿಲ್ಲೆಯ ವಿದ್ಯಾರ್ಥಿಗಳು ಪಡೆದಿದ್ದಾರೆ. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ, ಆರ್.ಟಿ.ಐ. ಪ್ರವೇಶ ಸೇರಿದಂತೆ ಶೈಕ್ಷಣಿಕ ಚಟುವಟಿಕೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾದ ದೀಪಾ ಅತ್ತಿಗೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪವಡಗೇರಿ, ಡಯಟ್ ಉಪನಿರ್ದೇಶಕ ಜಿ.ಎಂ.ಬಸವಲಿಂಗಪ್ಪ, ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ಬೆಳಗಾವಿ ವಿಭಾಗದ ಇನ್ಸ್‌ಪೈರ್ ಉಸ್ತುವಾರಿ ಅಧಿಕಾರಿ ಕುಪವಾಡಿ ವಿಜಯನ್ ಹಾಗೂ ಸುಕನ್ಯಾ ಬ್ಯಾನರ್ಜಿ, ಲತಾಮಣಿ, ಜಿ.ಎಲ್‌.ಯಲವದಹಳ್ಳಿ, ಡಯಟ್ ಉಪನ್ಯಾಸಕ ಅಂಬಿಗೇರ ಇದ್ದರು.

ಗಮನಸೆಳೆದ ವಿಜ್ಞಾನ ಮಾದರಿಗಳು: ರಸ್ತೆ ಅಪಘಾತ ತಡೆಯುವ ಕ್ರಮ, ಮೊಬೈಲ್‌ ಬಳಸಿ ಬೀದಿ ದೀಪ ನಿರ್ವಹಣೆ, ಸೌರ ಶಕ್ತಿಯ ಸೆನ್ಸಾರ್‌ನಿಂದ ಬೀದಿ ದೀಪ ನಿರ್ವಹಣೆ, ಸ್ವಯಂ ಚಾಲಿತ ರೇಲ್ವೆ ಗೇಟಿನ ನಿರ್ವಹಣೆ, ನೀರು ಶುದ್ಧೀಕರಣಘಟಕದ ಮಾದರಿ, ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶನಕ್ಕಿರಿಸಿದ 600ಕ್ಕೂ ಅಧಿಕ ವಿಜ್ಞಾನ ಮಾದರಿಗಳು ಎಲ್ಲರ ಗಮನ ಸೆಳೆಯುತ್ತಿವೆ.

*ಈ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಅತಿಹೆಚ್ಚು ಮಕ್ಕಳನ್ನು ನೋಂದಣಿ ಮಾಡಲಾಗಿದ್ದು, ರಾಷ್ಟ್ರಮಟ್ಟದ ಆನ್‌ಲೈನ್‌ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೆ ಏರಿದೆ
–ಅಂದಾನಪ್ಪ ವಡಗೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.