ಹಾನಗಲ್: ಪರಸ್ಪರ ಬಣ್ಣ ಎರಚಾ ಟದ ಮೂಲಕ ರಂಗು ರಂಗಾದ ಯುವಕ ಯುವತಿಯರು ಬಣ್ಣದ ಹಬ್ಬವಾದ ಹೋಳಿಯನ್ನು ಪಟ್ಟಣ ದಲ್ಲಿ ಭಾನುವಾರ ಸಂಭ್ರಮ ಹಾಗೂ ಸೌಹಾರ್ಧಯುತವಾಗಿ ಆಚರಿಸಿದರು.
ಯಾವುದೇ ಅಹಿತರ ಘಟನೆಗೆ ಅವಕಾಶ ನೀಡದಂತೆ ಅತ್ಯಂತ ಶಾಂತಿಯುತವಾಗಿ ಹೋಳಿ ಆಚರಿಸಿದ ಪಟ್ಟಣದ ಜನತೆ ಬಣ್ಣದಲ್ಲಿ ಮಿಂದೆದ್ದು ಸಂತಸಪಟ್ಟರು. ಬೆಳಿಗ್ಗೆ ಮಕ್ಕಳಿಂದ ಆರಂಭವಾದ ಬಣ್ಣ ಎರೆಚಾಟದಲ್ಲಿ ಯುವಕರು, ಯುವತಿಯರು, ಮಹಿಳೆ ಯರು ಸೇರಿದಂತೆ ವೃದ್ಧರೂ ಪರಸ್ಪರ ಬಣ್ಣ ಎರಚುವ ಮೂಲಕ ಹಬ್ಬದ ಖುಷಿಯಲ್ಲಿ ಪಾಲ್ಗೊಂಡರು.
ಇಲ್ಲಿನ ಚಾವಡಿ ಕ್ರಾಸ್‌ನಲ್ಲಿ ದೈವದ ಕಾಮನನ್ನು ದಹಿಸುವ ಮೂಲಕ ಚಾಲನೆ ನೀಡಲಾದ ಹಬ್ಬದಲ್ಲಿ ಯುವಕರು ಗುಂಪು-ಗುಂಪಾಗಿ ಹಲಗೆ ಬಾರಿಸುತ್ತ ವಿನೂತನ ನರ್ತನಗಳ ಮೂಲಕ ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಸಂಚರಿಸಿ ಕಂಡವರಿಗೆಲ್ಲ ಬಣ್ಣ ಎರಚುತ್ತ ಸಂಭ್ರಮಪಟ್ಟರು.
ಕಮಾಟ ಗೇರಿ, ಕಲ್ಲಹಕ್ಕಲ, ವೀರಭದ್ರೇಶ್ವರ ದೇವಸ್ಥಾನ, ತಾರಕೇಶ್ವರ ದೇವಸ್ಥಾನ, ಹೊಸ ಬಸ್ ನಿಲ್ದಾಣ ಸಮೀಪದ ಗಣೇಶ ದೇವಸ್ಥಾನ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾದ ರತಿ- ಕಾಮರನ್ನು ಶಾಸ್ತ್ರೋಕ್ತವಾಗಿ ದಹನ ಮಾಡಲಾಯಿತು.
ತರಹೇವಾರಿ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಯುವಕರು ಬೈಕ್‌ಗಳನ್ನೇರಿ ರಸ್ತೆ ಯುದ್ದಕ್ಕೂ ಬಣ್ಣ ಎರಚಿ ಸಂತಸ ಪಟ್ಟರು. ಹೋಳಿ ಹಬ್ಬದ ಅಂಗವಾಗಿ ಸುಮಾರು 500 ಕ್ಕೂ ಅಧಿಕ ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡ ಲಾಗಿತ್ತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋಡ, ಡಿ.ಎಸ್.ಪಿ ವಿ.ಎ. ಪೂಜಾರ, ಸಿ.ಪಿ.ಐ ಟಿ.ಎಚ್.ರಾಜಪ್ಪ ಮತ್ತು ಪಿ.ಎಸ್.ಐ ಚಿದಾನಂದ ಬಿಗಿ ಬಂದೋಬಸ್ತ್ ಕಯಗೊಂಡು ಸುಗಮ ಆಚರಣೆಗೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.