ADVERTISEMENT

ಹಾವೇರಿ: ಪ್ರವಾಹ ಪರಿಸ್ಥಿತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 6:00 IST
Last Updated 5 ಆಗಸ್ಟ್ 2013, 6:00 IST

ರಾಣೆಬೆನ್ನೂರು: ಶಿಕಾರಿಪುರ ಬಳಿಯ ಅಂಜನಾಪುರ ಜಲಾಶಯದಿಂದ ನದಿಗೆ ನೀರು ಬಿಟ್ಟಿದ್ದರಿಂದ ಕುಪ್ಪೇಲೂರು, ಮುಷ್ಟೂರು, ಲಿಂಗದಹಳ್ಳಿ, ಮಣ ಕೂರು ಮುಂತಾದ ಗ್ರಾಮಗಳಿಗೆ ಕುಮದ್ವತಿ ನದಿ ಪ್ರವಾಹ ಹೆಚ್ಚಾಗಿ ರಸ್ತೆ ಸಂಚಾರ ಸ್ಥಗಿತಗೊಂಡು ಜನಜೀವನಕ್ಕೆ ತೊಂದರೆಯಾಗಿದ್ದನ್ನು ಶಾಸಕ ಕೆ.ಬಿ. ಕೋಳಿವಾಡ ಅವರು ಕಂದಾಯ ಅಧಿ ಕಾರಿಗಳ ಜೊತೆಗೆ ಪರಿಶೀಲನೆ ನಡೆಸಿದರು.

`ಸರ್ಕಾರದಿಂದ ಕೊಡುವ ಯಾವ ತಾತ್ಕಾಲಿಕ ಪರಿಹಾರಗಳೂ ನಮಗೆ ಬೇಡ, 300ಕ್ಕೂ ಹೆಚ್ಚು ಕುಟುಂಬದ ವರು ಪ್ರತಿ ವರ್ಷ ಪ್ರವಾಹಕ್ಕೀಡಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಪಕ್ಕಾ ಮನೆ ನಿರ್ಮಿ ಸಿಕೊಡಬೇಕು' ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.

ತಹಶೀಲ್ದಾರ್ ಎಚ್.ಕೆ.ಶಿವಕುಮಾರ ಮಾತನಾಡಿ, ತಾಲ್ಲೂಕಿನ ಕುಪ್ಪೇ ಲೂರು, ಚೌಡಯ್ಯದಾನಪುರ, ಚಂದಾ ಪುರ, ಹರನಗಿರಿ ಮತ್ತು ಉದಗಟ್ಟಿ ಸೇತುವೆಗಳು ಸ್ಥಗಿತಗೊಂಡಿವೆ. ನದಿ ಸುತ್ತಮುತ್ತಲಿನ ಜಮೀನುಗಳು ಜಲಾ ವೃತಗೊಂಡಿವೆ. ತಾಲ್ಲೂಕಿನಾ ದ್ಯಂತ ಮಳೆ ಹಾನಿಯಿಂದ 312 ಮನೆಗಳು ಹಾನಿಯಾಗಿವೆ ಎಂದರು.

ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ, ಮಂಜು ನಾಥ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.

ಸತತ ಮಳೆಗೆ 40ಕ್ಕೂ ಹೆಚ್ಚು ಮನೆ ಕುಸಿತ
ಶಿಗ್ಗಾವಿ: ತಾಲ್ಲೂಕಿನ್ಯಾದಂತ ಸತತ ಎರಡು ವಾರದಿಂದ ಬಿಳುತ್ತಿರುವ ಬಾರಿ ಮಳೆಯಿಂದ ಗ್ರಾಮೀಣ ಪ್ರದೇಶ ದಲ್ಲಿನ ಅನೇಕ ಮನೆಗಳು ಬಿದ್ದು ಅಪಾರ ಹಾನಿ ಉಂಟಾಗಿದ್ದು. ಜನ ಸರಿಯಾದ ವಸತಿ ಹಾಗೂ ಆಹಾರಕ್ಕಾಗಿ ಪರದಾಡುವ ಜೊತೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

ತಾಲ್ಲೂಕಿನಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದು ಬಿದ್ದು ಪಾರ ಹಾನಿ ಸಂಭವಿಸಿದೆ. ಶಿಗ್ಗಾವಿ ಪಟ್ಟಣದ 3ನೇ ವಾರ್ಡಿನಲ್ಲಿ ಕುಮಾರ ಅಂಕಲಕೋಟಿ ಸೇರಿದಂತೆ ಒಂದೇ ಓಣಿಯಲ್ಲಿ ಸುಮಾರು ಆರು ಮನೆಗಳು ಕುಸಿದು ಬಿದ್ದಿವೆ. ಅಲ್ಲದೆ ಅವಲಕ್ಕಿ ತಯಾರಿಸುವ ಮಿಲ್ ಮೇಲ್ಚಾವಣಿ ಸಂಪೂರ್ಣ ಕುಸಿದು ಕಬ್ಬಿಣದ ರಾಡ್‌ಗಳು ಯಂತ್ರದ ಮೇಲೆ ಬಿದ್ದು, ಯಂತ್ರ ಗಳು ಸಂಪೂರ್ಣ ಹಾನಿಯಾಗಿದೆ.

ಪಟ್ಟಣದ ಪಕ್ಕೀರಪ್ಪ ಗಂಜೀಗಟ್ಟಿ, ಈರಪ್ಪ ಹಾವಣಗಿ, ಸಹದೇವಪ್ಪ ಹೊನ್ನಣವರ, ಬಸಪ್ಪ ಹಾವಣಗಿ, ಬಸವ ರಾಜ ನವಲಗುಂದ ಹಾಗೂ ತಾಲ್ಲೂಕಿನ ಬಂಕಾಪುರ ಪಟ್ಟಣದ ಮುಖ್ಯಪೇಟೆ ರಸ್ತೆಯಲ್ಲಿರುವ ಸೋಮ ಲಿಂಗಪ್ಪ ರಾಮಣ್ಣವರ, ಮಲ್ಲಿಕಾರ್ಜುನ ರಾಮಣ್ಣವರಿಗೆ ಸೇರಿದಂತೆ ಅನೇಕ ಮನೆಗಳು ಮಳೆಯಿಂದ ಕುಸಿದು ಭಾಗಶಃ ಹಾನಿಯಾಗಿವೆ. ಅದರಿಂದ ಹಾನಿಗೊಳಗಾದ ಜನರು ವಾಸಕ್ಕಾಗಿ ಪರದಾಡುತ್ತಿವೆ. ಆದರೆ ಈವರೆಗೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಸತತವಾಗಿ ಸುರಿಯುತ್ತಿರುವ ಮಳೆ ಯಿಂದ ಮನೆಗಳು ಕುಸಿದು ಮನೆಯಲ್ಲಿ ರುವ ಅಡಿಗೆ ಸಾಮಾನುಗಳು, ಆಹಾರ ದಾನ್ಯ, ಬಟ್ಟೆ, ಹಾಸಿಗೆಗಳು ಸೇರಿದಂತೆ ಇತರೆ ಸಾಮಗ್ರಿಗಳು ಸಂಪೂರ್ಣ ಹಾನಿಯಾಗಿ ಕುಟುಂಬದಲ್ಲಿನ ಮಕ್ಕಳು, ಮಹಿಳೆಯರು ಬದುಕಿಗಾಗಿ ಪರದಾಡು ತ್ತಿದ್ದಾರೆ. ಆದರೆ ಸಂಬಂಧಿಸಿದ ಅಧಿಕಾರಿ ಗಳು ಹಾನಿಗೊಳ ಗಾದ ಮನೆಗಳ ಕುರಿತು  ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲು ಮುಂದಾಗಬೇಕು ಎಂದು  ಸಾರ್ವಜನಿಕರು ಆಗ್ರಹಿಸುತ್ತಾರೆ.

ರಸ್ತೆ ಸಂಪರ್ಕ ಕಡಿತ
ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಮುಂದೆ ಹರಿಯುತ್ತಿರುವ ತುಂಗಭದ್ರಾ ನದಿಯ ನೀರು ಭಾನು ವಾರ ಮುಖ್ಯರಸ್ತೆಯ ಮೇಲೆ ಹರಿಯತೊಡಗಿದೆ.

ತಾಲ್ಲೂಕಿನ ಗಂಗಾಪುರ, ಶೀರನಹಳ್ಳಿ, ಹೊಸಸಿಂಗಟಾಲೂರ, ಹಮ್ಮಿಗಿ ಗ್ರಾಮಗಳಿಗೆ ಈ ರಸ್ತೆಯು ಸಂಪರ್ಕ ಕಲ್ಪಿಸುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಕೊರ್ಲಹಳ್ಳಿ ರಸ್ತೆಯ ಮೇಲೆ ನೀರು ಹರಿಯುತ್ತಿ ರುವುದರಿಂದ ಈ ರಸ್ತೆಯ ಮೇಲೆ ಓಡಾಡುತ್ತಿದ್ದ ವಾಹನಗಳು ಸುತ್ತು ವರಿದು ಬೀಡನಾಳ ಗ್ರಾಮದ ಮುಖ್ಯ ರಸ್ತೆಯ ಮೇಲೆ ಅಡ್ಡಾಡುವಂತಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.