ADVERTISEMENT

290 ಹಿರಿಯ ನಾಗರಿಕರಿಗೆ ಲಸಿಕೆ

ಜಿಲ್ಲೆಯಲ್ಲಿ ಮೊದಲ ಲಸಿಕೆ ಶೇ 69, ಎರಡನೇ ಲಸಿಕೆ ಶೇ 52ರಷ್ಟು ಪ್ರಗತಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 14:49 IST
Last Updated 5 ಮಾರ್ಚ್ 2021, 14:49 IST
ಬ್ಯಾಡಗಿ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಪಡೆಯುತ್ತಿರುವ ಹಿರಿಯ ನಾಗರಿಕ 
ಬ್ಯಾಡಗಿ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಪಡೆಯುತ್ತಿರುವ ಹಿರಿಯ ನಾಗರಿಕ    

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್‌ ಮೊದಲ ಲಸಿಕೆಯನ್ನು ಶೇ 69 ಮಂದಿ ಮತ್ತು ಎರಡನೇ ಲಸಿಕೆಯನ್ನು ಶೇ 52 ಮಂದಿ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 290 ಹಿರಿಯ ನಾಗರಿಕರು ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಮೊದಲ ಹಂತದಲ್ಲಿ ಮೊದಲ ಲಸಿಕೆಯನ್ನು 6981 ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಮತ್ತು 1673 ಖಾಸಗಿ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 8509 ಸಿಬ್ಬಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಇದುವರೆಗೆ ಶೇ 69 ಸಿಬ್ಬಂದಿ ಮಾತ್ರ ಲಸಿಕೆ ಪಡೆದಿದ್ದಾರೆ.

ಬ್ಯಾಡಗಿ–ಶೇ 81, ಹಾನಗಲ್‌–ಶೇ 64, ಹಾವೇರಿ– ಶೇ 75, ಹಿರೇಕೆರೂರು– ಶೇ 82, ರಾಣೆಬೆನ್ನೂರು– ಶೇ 65, ಸವಣೂರು– ಶೇ 53 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ ಶೇ 58 ವೈದ್ಯಕೀಯ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ.

ADVERTISEMENT

ಎರಡನೇ ಲಸಿಕೆಯನ್ನು ಶೇ 52 ಮಂದಿ ಮಾತ್ರ ಪಡೆದಿದ್ದಾರೆ. ಬ್ಯಾಡಗಿ– ಶೇ 56, ಹಾನಗಲ್‌– ಶೇ 49, ಹಾವೇರಿ– ಶೇ 41, ಹಿರೇಕೆರೂರು– ಶೇ 51, ರಾಣೆಬೆನ್ನೂರು– ಶೇ 64, ಸವಣೂರು– ಶೇ 53 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ ಶೇ 55 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ 5932 ಫ್ರಂಟ್‌ಲೈನ್‌ ವರ್ಕರ್‌ಗಳ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಅದರಲ್ಲಿ ಇದುವರೆಗೆ 2952 ಮಂದಿ ಅಂದರೆ ಶೇ 50 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.ಬ್ಯಾಡಗಿ– ಶೇ 45, ಹಾನಗಲ್‌– ಶೇ 34, ಹಾವೇರಿ–ಶೇ 49, ಹಿರೇಕೆರೂರು– ಶೇ 37, ರಾಣೆಬೆನ್ನೂರು– ಶೇ 46, ಸವಣೂರು– ಶೇ 49 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ ಶೇ 71 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಎರಡನೇ ಹಂತದಲ್ಲಿ 290 ಹಿರಿಯ ನಾಗರಿಕರು ಹಾಗೂ 45ರಿಂದ 60 ವರ್ಷದೊಳಗಿನ ಗಂಭೀರ ಕಾಯಿಲೆ ಎದುರಿಸುತ್ತಿರುವ 64 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.