ADVERTISEMENT

ಹಾವೇರಿ: ಬ್ಯಾಂಕ್‌ ಹೆಸರಿನಲ್ಲಿ 99 ಸಾವಿರ ವಂಚನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 15:55 IST
Last Updated 4 ನವೆಂಬರ್ 2022, 15:55 IST
ಸೈಬರ್‌ ಕ್ರೈಂನ ಪ್ರಾತಿನಿಧಿಕ ಚಿತ್ರ 
ಸೈಬರ್‌ ಕ್ರೈಂನ ಪ್ರಾತಿನಿಧಿಕ ಚಿತ್ರ    

ಹಾವೇರಿ: ನೀವು ಕೂಡಲೇ ಕೆವೈಸಿ ಅಪ್‌ಡೇಟ್‌ ಮಾಡಿದಿದ್ದರೆ, ನಿಮ್ಮ ಎಸ್‌ಬಿಐ ನೆಟ್‌ ಬ್ಯಾಂಕಿಂಗ್‌ ರದ್ದಾಗುತ್ತದೆ ಎಂದು ಮೆಸೇಜ್‌ ಕಳುಹಿಸಿ, ಬ್ಯಾಂಕ್‌ ಹೆಸರಿನಲ್ಲಿ ₹99 ಸಾವಿರ ವಂಚಿಸಲಾಗಿದೆ.

ಹಾವೇರಿಯ ಹೆಸ್ಕಾಂ ಕಚೇರಿಯ ಜೂನಿಯರ್‌ ಎಂಜಿನಿಯರ್‌ ಲಾಲ್‌ಸಾಬ್‌ ಮೆಹಬೂಬ್‌ಸಾಬ್‌ ನದಾಫ (43) ಹಣ ಕಳೆದುಕೊಂಡವರು.

ನದಾಫ ಅವರ ಮೊಬೈಲಿಗೆ ಅನಾಮಧೇಯ ಮೊಬೈಲ್‌ನಿಂದ ಬ್ಯಾಂಕ್‌ ಹೆಸರಿನಲ್ಲಿ ಮೆಸೇಜ್‌ ಬಂದಿತ್ತು. ಪಾನ್‌ ಕಾರ್ಡ್‌ ಅಪ್‌ಡೇಟ್‌ ಮಾಡಲು ಲಿಂಕ್‌ ಕ್ಲಿಕ್‌ ಮಾಡಿದಾಗ ಎಸ್‌ಬಿಐ ಬ್ಯಾಂಕ್‌ ಆ್ಯಪ್‌ ತರಹದ ಆ್ಯಪ್‌ ಓಪನೆ ಆಗಿದೆ.

ADVERTISEMENT

ಅದರಲ್ಲಿ ಯೂಸರ್‌ ಐಡಿ ಮತ್ತು ಪಾಸ್‌ ವರ್ಡ್‌ ನಮೂದಿಸಿದಾಗ, ನಂತರ ಬಂದ ಓಟಿಪಿ ಅನ್ನು ನಮೂದಿಸಿ ಸಬ್‌ಮಿಟ್‌ ಮಾಡಿದಾಗ ನದಾಫ ಅವರ ಅಕೌಂಟಿನಿಂದ ₹99 ಸಾವಿರ ‘ಬಿಲ್‌ ಡೆಸ್ಕ್‌’ ಮುಖಾಂತರ ಮತ್ತೊಂದು ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಾವೇರಿಯ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.